alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ಯುಯಲ್ ಕ್ಯಾಮರಾ ಹೊಂದಿರುವ ಸ್ಯಾಮ್ಸಂಗ್ ನ Galaxy J7+ ಬಿಡುಗಡೆ

ಕೆಲ ದಿನಗಳ ಹಿಂದೆ ಸ್ಯಾಮ್ಸಂಗ್, ಗ್ಯಾಲಕ್ಸಿ ನೋಟ್ 8 ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ ನಿಧಾನವಾಗಿ ಡ್ಯುಯೆಲ್ ಕ್ಯಾಮರಾ ಸೆಟ್ ಅಪ್ ನ ಮೊಬೈಲ್ ಮಾರುಕಟ್ಟೆಗೆ ತರ್ತಿದೆ. ಕಂಪನಿ ತನ್ನ ಹೊಸ ಮೊಬೈಲ್ ಗ್ಯಾಲಕ್ಸಿ ಜೆ7 ಪ್ಲಸ್ ಬಿಡುಗಡೆ ಮಾಡಿದೆ. ಥೈಲ್ಯಾಂಡ್ ನಲ್ಲಿ ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಫೋನ್ ಅನೇಕ ದಿನಗಳಿಂದ ಸುದ್ದಿಯಲ್ಲಿತ್ತು. ಮೊಬೈಲ್ ಹಿಂಭಾಗದಲ್ಲಿ ಡ್ಯುಯೆಲ್ ಕ್ಯಾಮರಾ ನೀಡಲಾಗಿದ್ದು, ಇದು ಈ ಫೋನ್ ನ ವಿಶೇಷತೆಯಾಗಿದೆ.

ಅಲ್ಯುಮಿನಿಯಂ ಬಾಡಿ ಹೊಂದಿರುವ ಗ್ಯಾಲಕ್ಸಿ ಜೆ7 ಪ್ಲಸ್ 5.5 ಇಂಚಿನ ಸೂಪರ್ AMOLED ಡಿಸ್ಲ್ಲೇ ಹೊಂದಿದೆ. 2.4GHz ಸ್ಪೀಡ್ ನ Mediatek Helio P20 ಪ್ರೊಸೆಸರ್ ನೀಡಲಾಗಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 4ಜಿಬಿ ರ್ಯಾಮ್ ಜೊತೆಗೆ 32ಜಿಬಿ ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಕಾರ್ಡ್ ಸಹಾಯದಿಂದ ಇದನ್ನು 256 ಜಿಬಿಗೆ ವಿಸ್ತರಿಸಬಹುದಾಗಿದೆ.

ಮೊಬೈಲ್ ಹಿಂದೆ 13 ಮೆಗಾಪಿಕ್ಸಲ್ ನ ಒಂದು ಹಾಗೂ 5 ಮೆಗಾಪಿಕ್ಸಲ್ ನ ಇನ್ನೊಂದು ಕ್ಯಾಮರಾ ನೀಡಲಾಗಿದೆ. ಸೆಲ್ಪಿ ಪ್ರಿಯರಿಗಾಗಿ 16 ಮೆಗಾಪಿಕ್ಸಲ್ ನ ಫ್ರೆಂಟ್ ಕ್ಯಾಮರಾ ನೀಡಲಾಗಿದೆ. ಫೋನ್ 3,600mAh ಬ್ಯಾಟರಿ ಹೊಂದಿದೆ. ಥೈಲ್ಯಾಂಡ್ ನಲ್ಲಿ ಈ ಮೊಬೈಲ್ ಬೆಲೆ 25 ಸಾವಿರ ರೂಪಾಯಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...