alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾಯ್ತು ಸ್ಯಾಮ್ಸಂಗ್ ನ ಬಜೆಟ್ ಫೋನ್

ಸ್ಯಾಮ್ಸಂಗ್ ಭಾರತದಲ್ಲಿ ಹೊಸ ಬಜೆಟ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಜೆ ಸರಣಿಯ ಸ್ಮಾರ್ಟ್ಫೋನ್ ಇದಾಗಿದ್ದು, ಗ್ಯಾಲಕ್ಸಿ ಜೆ2 2017ರ ಆವೃತ್ತಿಯಾಗಿದೆ. ಗ್ಯಾಲಕ್ಸಿ ಜೆ2 2017 ಸ್ಮಾರ್ಟ್ಫೋನ್ ಬಿಡುಗಡೆಗೆ ಕಂಪನಿ ಯಾವುದೇ ಕಾರ್ಯಕ್ರಮ ನಡೆಸಿಲ್ಲ. ತನ್ನ ವೆಬ್ಸೈಟ್ ನಲ್ಲಿ ಈ ಫೋನ್ ಸೇರ್ಪಡೆ ಮಾಡಿದೆ.

ಇದ್ರ ಮಾರಾಟ ಶೀಘ್ರದಲ್ಲಿಯೇ ಶುರುವಾಗಲಿದೆ. ಇದ್ರ ಬೆಲೆಯನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ. ಆದ್ರೆ ಇದನ್ನು ಬಜೆಟ್ ಫೋನ್ ಎನ್ನಲಾಗ್ತಾಯಿದೆ. ಸ್ಯಾಮ್ಸಂಗ್ 2015ರಲ್ಲಿ ಗ್ಯಾಲಕ್ಸಿ ಜೆ2 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿತ್ತು. ಆಗ ಅದ್ರ ಬೆಲೆ 8490 ರೂಪಾಯಿಯಾಗಿತ್ತು.

ಮುಂಬೈ ಚಿಲ್ಲರೆ ವ್ಯಾಪಾರಿಯೊಬ್ಬರು ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ2 2017 ಬಿಡುಗಡೆಯಾಗಿದೆ. ಇದ್ರ ಬೆಲೆ 7390 ರೂಪಾಯಿ ಎನ್ನುತ್ತಿದ್ದಾರೆ. ಸ್ಮಾರ್ಟ್ಫೊನ್ ಪಟ್ಟಿಯಲ್ಲಿ ಗ್ಯಾಲಕ್ಸಿ ಜೆ2 2017 ಸ್ಮಾರ್ಟ್ಫೋನ್ ಹೆಸರು ಸೇರ್ಪಡೆ ಮಾಡಿರುವ ಕಂಪನಿ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಯಾವಾಗ ಮಾರಾಟ ಶುರುವಾಗಲಿದೆ ಎಂಬ ಬಗ್ಗೆಯೂ ಮಾಹಿತಿ ನೀಡಿಲ್ಲ.

ಆಟೋಮೆಟಿಕ್ ಮೆಮೋರಿ ಮ್ಯಾನೇಜ್ಮೆಂಟ್ ಸಿಸ್ಟಂ ಇದ್ರಲ್ಲಿದೆ ಎನ್ನಲಾಗ್ತಿದೆ. 4.7 ಇಂಚಿನ ಡಿಸ್ಪ್ಲೇ ಇದು ಹೊಂದಿದೆ ಎಂದು ಮೂಲಗಳು ಹೇಳಿವೆ. ಒಂದು 1 ಜಿಬಿ ರ್ಯಾಮ್ ನೀಡಲಾಗಿದ್ದು, 8ಜಿಬಿ ಇಂಟರ್ನಲ್ ಮೆಮೊರಿ ನೀಡಲಾಗಿದೆಯಂತೆ. 5 ಮೆಗಾಪಿಕ್ಸಲ್ ರಿಯಲ್ ಕ್ಯಾಮರಾ ಹಾಗೂ 2 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ಇದ್ರಲ್ಲಿರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...