alex Certify
ಕನ್ನಡ ದುನಿಯಾ       Mobile App
       

Kannada Duniya

ಒಮ್ಮೆ ಚಾರ್ಜ್ ಮಾಡಿದರೆ 318 ಗಂಟೆ ಕೆಲಸ ಮಾಡುತ್ತೆ ಈ ಫೋನ್ !

Samsung-Galaxy-Folder-2-SM-G1600-09ಕಳೆದ ಕೆಲವು ತಿಂಗಳಿಂದ ಸುದ್ದಿಯಲ್ಲಿದ್ದ ಸ್ಯಾಮ್ ಸಂಗ್ ನ ಗೆಲಾಕ್ಸಿ ಫೋಲ್ಡರ್ 2 ಸ್ಮಾರ್ಟ್ ಫೋನ್ ಚೀನಾದಲ್ಲಿ ಲಾಂಚ್ ಆಗಿದೆ. ಈ ಡಿವೈಸ್ ಒಂದು ಫ್ಲಿಪ್ ಫೋನ್ ಆಗಿದ್ದು ಎಂಡ್ರಾಯ್ಡ್ 6.0 ಮಾರ್ಶ್ ಮೈಲೋ ಆಪರೇಟಿಂಗ್ ಸಿಸ್ಟಮ್ ನಿಂದ ಕಾರ್ಯ ನಿರ್ವಹಿಸುತ್ತದೆ.

ಸ್ಯಾಮ್ ಸಂಗ್ ಗೆಲಾಕ್ಸಿ ಫೋಲ್ಡರ್ ನಲ್ಲಿ 1.4 GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರ್ಯಾಗನ್ 425 ಚಿಪ್ ಸೆಟ್ ಇದೆ. 2 ಜಿಬಿಯ ರ್ಯಾಮ್ ಮತ್ತು ಇನ್ ಬಿಲ್ಟ್ ಸ್ಟೋರೇಜ್ 16 ಜಿಬಿ ಇದ್ದು, ಇದನ್ನು 128 ಜಿಬಿಯ ತನಕ ಹೆಚ್ಚಿಸಿಕೊಳ್ಳಬಹುದಾಗಿದೆ.

3.8 ಇಂಚಿನ WVGA ಡಿಸ್ಪ್ಲೇ ಇರುವ ಈ ಫೋನಿನ ರೆಸಲ್ಯೂಶನ್ 480×800 ಆಗಿದೆ. ಫೋಲ್ಡರ್ 2 ಫೋನಿನಲ್ಲಿ ಎಲ್ ಇ ಡಿ ಫ್ಲ್ಯಾಶ್ ಜೊತೆಗೆ 8 ಮೆಗಾ ಫಿಕ್ಸೆಲ್ ರಿಯರ್ ಕ್ಯಾಮರಾ ಮತ್ತು ಫ್ರಂಟ್ ಕ್ಯಾಮರಾ 5 ಮೆಗಾ ಫಿಕ್ಸೆಲ್ ಇದೆ. 1950 mAh ಸಾಮರ್ಥ್ಯದ ಬ್ಯಾಟರಿ ಇದ್ದು, ಇದು 318 ಗಂಟೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ.

ಸ್ಯಾಮ್ ಸಂಗ್ ಫೋಲ್ಡರ್ 2 ಜಿಪಿಎಸ್, 4ಜಿ, ವೈಫೈ, ಬ್ಲ್ಯೂಟೂತ್ ಗಳನ್ನು ಸಪೋರ್ಟ್ ಮಾಡುತ್ತದೆ. ಈ ಮೊಬೈಲ್ ಬೆಲೆ ಎಷ್ಟು, ಭಾರತದಲ್ಲಿ ಇದು ಯಾವಾಗ ಲಭ್ಯವಾಗುತ್ತದೆ ಎಂಬುದರ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...