alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾಮ್ಸಂಗ್ ಎಸ್ 8, ಎಸ್ 8 ಪ್ಲಸ್ ಮೇಲೆ ಭಾರೀ ರಿಯಾಯಿತಿ

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಭಾರತದಲ್ಲಿ ನವರಾತ್ರಿಗೂ ಮೊದಲೇ ಭರ್ಜರಿ ಆಫರ್ ನೀಡ್ತಾಯಿದೆ. ಎಸ್ 8 ಹಾಗೂ ಎಸ್ 8 ಪ್ಲಸ್ ಸ್ಮಾರ್ಟ್ಫೋನ್ ಬೆಲೆಯಲ್ಲಿ 4 ಸಾವಿರ ರೂಪಾಯಿ ಕಡಿತವಾಗಿದೆ. ಮೂಲಗಳ ಪ್ರಕಾರ ಹೆಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು ಶಾಪಿಂಗ್ ಮಾಡಿದ್ರೆ ಎಸ್ 8 ಹಾಗೂ ಎಸ್ 8 ಪ್ಲಸ್ ಮೊಬೈಲ್ ಮೇಲೆ 4 ಸಾವಿರ ರೂಪಾಯಿ ಡಿಸ್ಕೌಂಟ್ ಸಿಗಲಿದೆ.

ಹೆಚ್ ಡಿ ಎಫ್ ಸಿ ಕಾರ್ಡ್ ಹೊಂದಿರುವವರಿಗೆ ಗ್ಯಾಲಕ್ಸಿ ಎಸ್ 8 ಪ್ಲಸ್ ( 128 ಜಿಬಿ) ಮೇಲೆ 4 ಸಾವಿರ ರೂಪಾಯಿ ಕ್ಯಾಶ್ಬ್ಯಾಕ್ ನೀಡಲು ಕಂಪನಿ ಮುಂದಾಗಿದೆ. ಹಾಗೆ ಸಾವಿರ ರೂಪಾಯಿ ರಿಯಾಯಿತಿ ಕೂಡ ಸಿಗ್ತಿದೆ.

ಇತ್ತೀಚಿಗಷ್ಟೇ ಭಾರತದಲ್ಲಿ ಸ್ಯಾಮ್ಸಂಗ್  Galaxy Note 8 ಬಿಡುಗಡೆ ಮಾಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈವರೆಗೆ 2.5 ಲಕ್ಷ ರಿಜಿಸ್ಟ್ರೇಶನ್ ಸಿಕ್ಕಿದೆ. Galaxy Note 8ಗಾಗಿ ಅಮೆಜಾನ್ ನಲ್ಲಿ 1.5 ಲಕ್ಷ ಗ್ರಾಹಕರು ರಿಜಿಸ್ಟ್ರೇಶನ್ ಮಾಡಿದ್ದಾರೆ. ಮೊದಲ ದಿನವೇ 72 ಸಾವಿರ ಗ್ರಾಹಕರು ಮೊಬೈಲ್ ಗಾಗಿ ಹೆಸರು ದಾಖಲಿಸಿದ್ದಾರೆ.

ಸ್ಯಾಮ್ಸಂಗ್ ಇಂಡಿಯಾ ವೆಬ್ ಸೈಟ್ ನಲ್ಲಿಯೂ 1 ಲಕ್ಷಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿದ್ದಾರೆ. ಅಮೆಜಾನ್ ನೋಟ್ 8 ಉಚಿತ ಬುಕ್ಕಿಂಗ್ ಮತ್ತೆ ಶುರುಮಾಡಿದೆ. ಸೆಪ್ಟೆಂಬರ್ 21ರಿಂದ ಮೊಬೈಲ್ ಗ್ರಾಹಕರ ಕೈ ಸೇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...