alex Certify
ಕನ್ನಡ ದುನಿಯಾ       Mobile App
       

Kannada Duniya

GST ಯಿಂದ ಸರ್ಕಾರದ ಬೊಕ್ಕಸಕ್ಕೆ ಹರಿದುಬಂದಿದೆ ಭಾರೀ ಆದಾಯ

ಭಾರತದ ಚೊಚ್ಚಲ ಜಿಎಸ್ಟಿ ಆದಾಯ ಸಮಾಧಾನಕರವಾಗಿದೆ. ಜುಲೈ ತಿಂಗಳಿನಿಂದ ಈವರೆಗೆ ಶೇ.64.42 ತೆರಿಗೆದಾರರಿಂದ ಒಟ್ಟು 92,283 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿದೆ. ಜುಲೈನಲ್ಲಿ ಸರಕು ಮತ್ತು ಸೇವಾ ತೆರಿಗೆ ದೇಶದಲ್ಲಿ ಜಾರಿಯಾಗಿತ್ತು.

ಎಕ್ಸೈಸ್ ಡ್ಯೂಟಿ, ಸರ್ವೀಸ್ ಟ್ಯಾಕ್ಸ್, ವ್ಯಾಟ್ ಸೇರಿದಂತೆ ಹಲವು ಬಗೆಯ ಹೊಸ ತೆರಿಗೆಗಳನ್ನು ವಿಧಿಸಲಾಗಿತ್ತು. ಹಣಕಾಸು ಸಚಿವಾಲಯ 91,000 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿತ್ತು. ಆದ್ರೆ ನಿರೀಕ್ಷೆಗೂ ಮೀರಿ ಅಧಿಕ ತೆರಿಗೆ ಸರ್ಕಾರದ ಬೊಕ್ಕಸ ಸೇರಿದೆ.

38.88 ಲಕ್ಷ ಮಂದಿ ಜಿಎಸ್ಟಿ ಪಾವತಿಸಿದ್ದಾರೆ. ಮೊದಲ ಮಂತ್ಲಿ ರಿಟರ್ನ್ಸ್  ಹಾಗೂ ಜಿಎಸ್ಟಿ ತೆರಿಗೆ ಪಾವತಿಗೆ ಆಗಸ್ಟ್ 25 ಕೊನೆಯ ದಿನವಾಗಿತ್ತು. ವಿಳಂಬವಾಗಿ ಹಣ ಪಾವತಿಗೆ ಅವಕಾಶವಿದೆ, ಆದ್ರೆ ಸೆಂಟ್ರಲ್ ಜಿಎಸ್ಟಿ ಮೇಲೆ ದಿನಕ್ಕೆ 100 ರೂಪಾಯಿ ದಂಡ ವಿಧಿಸಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...