alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟ್ ಬ್ಯಾನ್ ಬಳಿಕ ವಶಪಡಿಸಿಕೊಳ್ಳಲಾದ ನಗದು, ಚಿನ್ನ-ಬೆಳ್ಳಿ ಎಷ್ಟು ಗೊತ್ತಾ..?

ನವದೆಹಲಿ: ನೋಟ್ ಬ್ಯಾನ್ ಬಳಿಕ ವಿಮಾನ ನಿಲ್ದಾಣಗಳಲ್ಲಿ ಇದುವರೆಗೂ 87 ಕೋಟಿ ರೂ. ನಗದು, 2600 ಕೆ.ಜಿ. ಚಿನ್ನ, ಬೆಳ್ಳಿ ಜಫ್ತಿ ಮಾಡಲಾಗಿದೆ.

ದೆಹಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ ಹೆಚ್ಚಿನ ಪ್ರಮಾಣದ ಚಿನ್ನ, ಜೈಪುರ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.

ದೇಶದಲ್ಲಿನ 59 ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಸಿ.ಐ.ಎಸ್.ಎಫ್. ನಿಗಾ ವಹಿಸುತ್ತದೆ. ಕಳೆದ ವರ್ಷ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿದ ಬಳಿಕ ವಿಮಾನ ನಿಲ್ದಾಣಗಳಲ್ಲಿ 87 ಕೋಟಿ ರೂ. ನಗದು, 2600 ಕೆ.ಜಿ. ಚಿನ್ನ, ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.

ನೋಟ್ ಬ್ಯಾನ್ ಬಳಿಕ ಅನುಮಾನಾಸ್ಪದ ನಗದು ಮತ್ತು ಉನ್ನತ ಮೌಲ್ಯದ ವಸ್ತುಗಳನ್ನು ಪರೀಕ್ಷಿಸಲು ಹಣಕಾಸು ಸಚಿವಾಲಯ ತಿಳಿಸಿತ್ತು. ಅದರಂತೆ ಮುಂಬೈ ನಿಲ್ದಾಣದಲ್ಲಿ ಗರಿಷ್ಠ ಮೊತ್ತದ ನಗದು ಅಂದರೆ, 33 ಕೋಟಿ ರೂ.ಗಿಂತಲೂ ಹೆಚ್ಚಿನ ಹಣ ವಶಕ್ಕೆ ಪಡೆಯಲಾಗಿದೆ.

ದೆಹಲಿಯಲ್ಲಿ 498 ಕೆ.ಜಿ.ಗಿಂತ ಹೆಚ್ಚಿನ ಪ್ರಮಾಣದ ಚಿನ್ನ, ಜೈಪುರದಲ್ಲಿ 266 ಕೆ.ಜಿ.ಗಿಂತ ಹೆಚ್ಚಿನ ಪ್ರಮಾಣದ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿ.ಐ.ಎಸ್.ಎಫ್. ವಕ್ತಾರರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...