alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುಪಯುಕ್ತವಾಗಿವೆ 78,300 ಕೋಟಿ ರೂ. ಮೌಲ್ಯದ ವಸ್ತುಗಳು

indian-homes-have-rs-78300-cr-worth-of-used-goodsಭಾರತೀಯರು ಕೆಲವೊಂದು ವಸ್ತುಗಳ ಮೇಲೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೀಗಾಗಿ ಅವುಗಳ ಅಗತ್ಯವಿಲ್ಲದಿದ್ದರೂ ಮಾರಾಟ ಮಾಡಲು ಮುಂದಾಗುವುದಿಲ್ಲ. ಹೀಗೆ ಭಾರತದಲ್ಲಿ ಬಳಸಬಹುದಾದ ವಸ್ತುಗಳು ನಿರುಪಯುಕ್ತವಾಗಿ ಇರುವುದರ ಮೌಲ್ಯವೇ 78,300 ಕೋಟಿ ರೂ. ಗಳೆಂದು ಅಂದಾಜಿಸಲಾಗಿದೆ.

ಆನ್ ಲೈನ್ ಮಾರಾಟ ಸಂಸ್ಥೆ OLX India ಈ ಕುರಿತು ದೇಶದ 16 ಪ್ರಮುಖ ನಗರಗಳಲ್ಲಿ ಸಮೀಕ್ಷೆ ನಡೆಸಿದ್ದು, ಈ ವೇಳೆ ಮಾಹಿತಿ ಬಹಿರಂಗವಾಗಿದೆ. ಅಲ್ಲದೇ ಇಂತಹ ವಸ್ತುಗಳನ್ನಿರಿಸಲು ತಮ್ಮ ಮನೆಯಲ್ಲಿ ವೃಥಾ ಸ್ಥಳವನ್ನು ಬಳಸಿಕೊಂಡಿರುವುದು ಕಂಡು ಬಂದಿದೆ.

ಹೀಗಾಗಿ ಜನತೆ, ತಮಗೆ ಬೇಕಿಲ್ಲದ ವಸ್ತುಗಳನ್ನು ಮಾರಾಟ ಮಾಡಿದರೆ ಅದರ ಅಗತ್ಯವಿರುವವರು ಕೊಂಡುಕೊಳ್ಳುತ್ತಾರೆ. ಇದರಿಂದ ಸದುಪಯೋಗವಾಗುತ್ತದೆ ಎಂದು ಹೇಳಲಾಗಿದೆ. ಸಾರ್ವಜನಿಕರಲ್ಲಿ ಈಗ ಆನ್ ಲೈನ್ ಮಾರಾಟದ ಕುರಿತು ಹೆಚ್ಚಿನ ಅರಿವು ಮೂಡುತ್ತಿದ್ದು, ತಮಗೆ ಅಗತ್ಯವಿಲ್ಲದ ವಸ್ತುಗಳನ್ನು ಮಾರಾಟ ಮಾಡಿ ಬೇಕಾದುದ್ದನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...