alex Certify
ಕನ್ನಡ ದುನಿಯಾ       Mobile App
       

Kannada Duniya

4 ದಿನಗಳಲ್ಲಿ ಹೂಡಿಕೆದಾರರು ಕಳೆದುಕೊಂಡಿರುವ ಹಣದ ಮೊತ್ತ ಕೇಳಿದ್ರೆ ಬೆಚ್ಚಿ ಬೀಳ್ತಿರಾ…!

ನಾಲ್ಕು ದಿನಗಳಲ್ಲಿ ದೇಶದ ಮಾರುಕಟ್ಟೆಯಲ್ಲಿ ಉಂಟಾದ ಕುಸಿತ ಹೂಡಿಕೆದಾರರನ್ನು ಅಕ್ಷರಶಃ ತಲೆ ಮೇಲೆ ಕೈ ಹೊತ್ತು ಕೂರುವಂತೆ ಮಾಡಿದೆ. ಒಟ್ಟಾರೆ 5,66,187 ಕೋಟಿಯಷ್ಟು ಹೂಡಿಕೆ ನಷ್ಟವಾಗಿದ್ದು ಮುಂಬೈನ ದಲಾಲ್ ಸ್ಟ್ರೀಟ್ ಇತ್ತೀಚಿನ ದಿನಗಳಲ್ಲಿ ಇಂತಹ ಹೊಡೆತವನ್ನು ಯಾವತ್ತೂ ನೋಡಿರಲಿಲ್ಲ.

ಶುಕ್ರವಾರ ಒಂದೇ ದಿನದಲ್ಲಿ ಬಿ.ಎಸ್.ಇ. ಸೆನ್ಸೆಕ್ಸ್ ಸೂಚ್ಯಂಕ 1249(ಶೇ.3.28) ಇಳಿಮುಖವಾಗಿದ್ದು, ನಿಫ್ಟಿ ಕೂಡ 372 ಸೂಚ್ಯಂಕ(ಶೇ.3.23) ಇಳಿಕೆ ಕಂಡಿತು. ಬಿಎಸ್ಇ ಲಿಸ್ಟ್ ನಲ್ಲಿರುವ ಬ್ಯಾಂಕ್, ಫಾರ್ಮಾ, ರಿಯಾಲಿಟಿ ಶೇರುಗಳು ಇನ್ನಿಲ್ಲದಂತೆ ನೆಲಕಚ್ಚಿದ್ದು, ಕಂಪನಿಗಳು ಒಟ್ಟು 2,02,433.26 ಕೋಟಿ ನಷ್ಟ ಅನುಭವಿಸಿತು.

ಶುಕ್ರವಾರದ ಮಾರುಕಟ್ಟೆ ಅವಧಿ ಬಗ್ಗೆ ಆರ್ಥಿಕ ತಜ್ಞ, ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳುವುದು ಹೀಗೆ, ಮಾರುಕಟ್ಟೆ ಯೆಸ್ ಬ್ಯಾಂಕ್ ಮತ್ತು ಆರ್ಬಿಐನ ಮಾರುಕಟ್ಟೆ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಆರ್.ಬಿ.ಐ. ತನ್ನ ನೀತಿಗಳನ್ನು ಬಲಪಡಿಸಿದ್ದರಿಂದ ಮಾರುಕಟ್ಟೆಯಲ್ಲಿ ಬಿಕ್ಕಟ್ಟು ಉಂಟಾಗಿ ಪರಿಸ್ಥಿತಿ ಕಠಿಣವಾಯಿತು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...