alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲೇ ರಸ್ತೆಗಿಳಿಯಲಿದೆ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಿಕ್ ಬೈಕ್

ರಾಯಲ್ ಎನ್ ಫೀಲ್ಡ್ ಸದ್ಯ ಬಹುಬೇಡಿಕೆಯುಳ್ಳ ಬೈಕ್. ಹೊಸ ಮಾಡೆಲ್ ಗಳಾದ 650cc Twins Continental GT650 ಹಾಗೂ Interceptor 650 INT ಬೈಕ್ ಗಳನ್ನು ಕಂಪನಿ ಈಗಾಗ್ಲೇ ರಸ್ತೆಗಿಳಿಸಿದೆ. ಇದೀಗ ಹೊಸ ಮೂರು ಪ್ರಯತ್ನಗಳಿಗೂ ಕೈಹಾಕಿದೆ.

ಪರಿಸರ ಸ್ನೇಹಿ ಬೈಕ್ ಗಳನ್ನು ತಯಾರಿಸಲು ಮುಂದಾಗಿದೆ. ಬದಲಾಯಿಸಬಹುದಾದಂತಹ ದೊಡ್ಡ ಎಂಜಿನ್ ಉಳ್ಳ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ಅನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಇದರ ಜೊತೆಜೊತೆಗೆ ಎಲೆಕ್ಟ್ರಿಕ್ ಮೋಟರ್ ಸೈಕಲ್ ಗಳನ್ನು ಕೂಡ ತಯಾರಿಸಲಾಗ್ತಿದೆ.

ರಾಯಲ್ ಎನ್ ಫೀಲ್ಡ್ ಯುಕೆ ಟೆಕ್ನಾಲಜಿ ಸೆಂಟರ್ ಹಾಗೂ ಚೆನ್ನೈ ತಂಡಗಳು ಜಂಟಿಯಾಗಿ ಹೊಸ ಎಂಜಿನ್ ತಯಾರಿಕೆಯಲ್ಲಿ ಬ್ಯುಸಿಯಾಗಿವೆ. 2018ರ ಏಪ್ರಿಲ್ ನಲ್ಲಿ ಎರಡೂ ಬಗೆಯ ಬೈಕ್ ಗಳು ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಎಪ್ರಿಲ್ 2018ರಿಂದ ದ್ವಿಚಕ್ರ್ ವಾಹನಗಳಿಗೆ 125 ಸಿಸಿ ಕಡ್ಡಾಯ ಮಾಡಿರುವುದರಿಂದ ಹೊಸ ನಿಯಮಕ್ಕೆ ಅನುಗುಣವಾಗಿ ಮೋಟಾರ್ ಸೈಕಲ್ ಅನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...