alex Certify
ಕನ್ನಡ ದುನಿಯಾ       Mobile App
       

Kannada Duniya

GST ಹೆಸರಲ್ಲಿ ವಂಚಿಸುತ್ತಿವೆಯಾ ಹೋಟೆಲ್ ಗಳು? ಇಲ್ಲಿದೆ ಪರಿಹಾರ….

ನವೆಂಬರ್ ತಿಂಗಳ ಆರಂಭದಲ್ಲೇ ರೆಸ್ಟೋರೆಂಟ್ ಗಳ ಮೇಲಿನ ಜಿಎಸ್ಟಿಯನ್ನು ಕೇಂದ್ರ ಸರ್ಕಾರ ಶೇ.5 ಕ್ಕೆ ಇಳಿಕೆ ಮಾಡಿದೆ. ಸ್ಟಾರ್ ಹೋಟೆಲ್ ಗಳಿಗೆ ಮಾತ್ರ ಶೇ.18 ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಿದೆ. ಆದ್ರೆ ಕೆಲವು ಹೋಟೆಲ್ ಗಳು ತೆರಿಗೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ನೀಡುತ್ತಿಲ್ಲ.

ತಿನಿಸುಗಳ ದರವನ್ನು ಇಳಿಕೆ ಮಾಡಿಲ್ಲ. ಇನ್ನು ಕೆಲ ಹೋಟೆಲ್ ಗಳಲ್ಲಿ ಜಿಎಸ್ಟಿ ಹೆಸರಲ್ಲಿ ಈಗ್ಲೂ ಗ್ರಾಹಕರಿಂದ ಹೆಚ್ಚು ಹಣ ಪಡೆಯಲಾಗ್ತಿದೆ. ಅಂತಹ ರೆಸ್ಟೋರೆಂಟ್ ಗಳೇನಾದ್ರೂ ನಿಮ್ಮ ಕಣ್ಣಿಗೆ ಬಿದ್ರೆ, ಅದನ್ನು ನೀವು ಸರ್ಕಾರದ ಗಮನಕ್ಕೆ ತರಬಹುದು.

ಇದಕ್ಕಾಗಿಯೇ ಸರ್ಕಾರ CBEC ಮಿತ್ರಾ ಹೆಲ್ಪ್ ಡೆಸ್ಕ್ ಆರಂಭಿಸಿದೆ. ಅಷ್ಟೇ ಅಲ್ಲ https://cbec-gst.gov.in/ ವೆಬ್ ಸೈಟ್ ಗೆ ಕೂಡ ನೀವು ವಿಸಿಟ್ ಮಾಡಬಹುದು. ಬಲಭಾಗದಲ್ಲಿರುವ ರೈಸ್ ವೆಬ್ ಟಿಕೆಟ್ ಆಪ್ಷನ್ ಕ್ಲಿಕ್ ಮಾಡಿ. ನಿಮ್ಮ ಹೆಸರು, ಇಮೇಲ್ ಐಡಿಯನ್ನು ನಮೂದಿಸಿ, ನಿಮ್ಮ ದೂರನ್ನು ಕೂಡ ದಾಖಲಿಸಿ.

CBEC ಮಿತ್ರಾ ಹೆಲ್ಪ್ ಡೆಸ್ಕ್ ಗೆ ಕೂಡ ನೀವು ಕರೆ ಮಾಡಬಹುದು. ಇದಕ್ಕಾಗಿ 1800 1200 232ಗೆ ಕರೆ ಮಾಡಿ. ಇಲ್ಲವೇ   [email protected] ಗೆ ಇಮೇಲ್ ಕೂಡ ಮಾಡಬಹುದು. ಜಿಎಸ್ಟಿ ಹೆಲ್ಪ್ ಡೆಸ್ಕ್ ಸಹಾಯವನ್ನೂ ನೀವು ಪಡೆಯಬಹುದು. ಹೆಲ್ಪ್ ಡೆಸ್ಕ್ ನಂಬರ್ – 0120-4888999, ಇಮೇಲ್ – [email protected]. ಜಿಎಸ್ಟಿ ಬಗ್ಗೆ ದೂರು ನೀಡಲು 011 23370115ಗೆ ಕರೆಮಾಡಿ.

ಹಣಕಾಸು ಸಚಿವಾಲಯ ಹಾಗೂ ಜಿಎಸ್ಟಿ ಟ್ವಿಟ್ಟರ್ ಮೂಲಕವೂ ನಿಮ್ಮ ಅಳಲು ತೋಡಿಕೊಳ್ಳಬಹುದು. GST @askGST_GoI ಮತ್ತು Finance Ministry (@FinMinIndia ದಲ್ಲಿ ವಂಚಕ ರೆಸ್ಟೋರೆಂಟ್ ಗಳ ಬಗ್ಗೆ ಮಾಹಿತಿ ನೀಡಿ.

ಗ್ರಾಹಕ ವ್ಯವಹಾರಗಳ ಇಲಾಖೆಯಲ್ಲೂ ನಿಮ್ಮ ದೂರನ್ನು ದಾಖಲು ಮಾಡಬಹುದು. ಟೋಲ್ ಫ್ರೀ ಸಂಖ್ಯೆ 1800114000ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ. ಸರ್ಕಾರವೇ ಲಾಂಚ್ ಮಾಡಿರೋ ಜಿಎಸ್ಟಿ ರೇಟ್ ಫೈಂಡರ್ ಆ್ಯಪ್ ಮೂಲಕ ನಿರ್ದಿಷ್ಟ ಜಿಎಸ್ಟಿ ದರ ಎಷ್ಟು ಅನ್ನೋದನ್ನು ತಿಳಿದುಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...