alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಫೋನ್ ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ….

ಜಿಯೋ ಫೋನ್ ಬಗ್ಗೆ ಗ್ರಾಹಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ. ದೀಪಾವಳಿಗೂ ಮುನ್ನ 6 ಮಿಲಿಯನ್ 4ಜಿ ವೋಲ್ಟ್ ಫೋನ್ ಅನ್ನು ಗ್ರಾಹಕರಿಗೆ ತಲುಪಿಸೋದಾಗಿ ಕಂಪನಿ ಹೇಳಿದೆ. ಆದ್ರೆ ಎರಡನೇ ಬಾರಿಗೆ ಪ್ರಿ-ಬುಕ್ಕಿಂಗ್ ಇನ್ನೂ ಆರಂಭವಾಗಿಲ್ಲ. ಜಿಯೋ ಫೋನ್ ಕೊಂಡು ಕೊಳ್ಳುವ ಮುನ್ನ ನೀವು ತಿಳಿದುಕೊಳ್ಳಬೇಕಾದ ಟರ್ಮ್ಸ್ & ಕಂಡಿಷನ್ಸ್ ಬಗ್ಗೆ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಜಿಯೋ ಫೋನ್ ಗಾಗಿ ನೀವು ಕೊಡುವ 1500 ರೂಪಾಯಿಯನ್ನು ಮರುಪಾವತಿ ಮಾಡಲಾಗುತ್ತದೆ. ಮೂರು ವರ್ಷಗಳ ಬಳಿಕ ನೀವು ಫೋನ್ ಮರಳಿಸಿದ ಬಳಿಕ ನಿಮಗೆ ಹಣವನ್ನು ವಾಪಸ್ ಕೊಡಲಾಗುತ್ತದೆ. ಪ್ರಿ ಬುಕ್ಕಿಂಗ್ ವೇಳೆ ನೀವು 500 ರೂ ಪಾವತಿಸಬೇಕು. ಉಳಿದ 1000 ರೂಪಾಯಿಯನ್ನು ಫೋನ್ ಡೆಲಿವರಿ ಸಮಯದಲ್ಲಿ ಕೊಡಬೇಕು.

ಜಿಯೋ ಫೋನ್ ಅನ್ನು ಮೂರು ವರ್ಷಗಳ ನಂತರ ಮರಳಿಸುವ ಸಂದರ್ಭದಲ್ಲೂ ಕೆಲವೊಂದು ನಿಯಮಗಳಿವೆ. ಫೋನ್ ಒಡೆದಿರಬಾರದು. ಅದರಲ್ಲಿರುವ ಸಾಫ್ಟ್ ವೇರ್ ಗೆ ಹಾನಿಯಾಗಿರಬಾರದು. ಒರಿಜಿನಲ್ ಪಾರ್ಟ್ಸ್ ತೆಗೆದಿರಬಾರದು. ನೀವು ಯಾವ ಸ್ಥಿತಿಯಲ್ಲಿ ಖರೀದಿಸಿರುತ್ತೀರೋ ಅದೇ ರೀತಿಯಲ್ಲಿರಬೇಕು.

ಅಕಸ್ಮಾತ್ ನೀವು ಮೂರು ವರ್ಷಕ್ಕೂ ಮುನ್ನವೇ ಜಿಯೋ ಫೋನ್ ಮರಳಿಸಿದರೆ ನೀವು ಪಾವತಿಸಿರುವ ಪೂರ್ತಿ ಹಣ ನಿಮಗೆ ಮರಳಿ ದೊರೆಯುವುದಿಲ್ಲ. 36 ತಿಂಗಳುಗಳ ನಂತರ ಫೋನ್ ಮರಳಿಸಿದರೆ ಮಾತ್ರ ನಿಮಗೆ 1500 ರೂ. ಸಿಗುತ್ತದೆ.

12 ತಿಂಗಳುಗಳಿಗೆ  ಜಿಯೋ ಫೋನ್ ವಾಪಸ್ ಮಾಡಿದ್ರೆ 1500 ರೂ. ಜೊತೆಗೆ ಜಿಎಸ್ಟಿ ಹಾಗೂ ತೆರಿಗೆ ಮೊತ್ತವನ್ನು ಗ್ರಾಹಕರೇ ಪಾವತಿಸಬೇಕಾಗುತ್ತದೆ. 24 ತಿಂಗಳುಗಳಿಗೆ ಮರಳಿಸಿದರೆ ನಿಮ್ಮ 1000 ರೂ ಡೆಪಾಸಿಟ್ ಹಣವನ್ನು ಕಡಿತ ಮಾಡಲಾಗುತ್ತದೆ. 2 ವರ್ಷಗಳ ನಂತರ 36 ತಿಂಗಳುಗಳೊಳಗೆ ಫೋನ್ ವಾಪಸ್ ಮಾಡಲು ಬಯಸಿದಲ್ಲಿ ಜಿಎಸ್ಟಿ, ಇತರ ತೆರಿಗೆ ಹಾಗೂ 500 ರೂಪಾಯಿಯನ್ನು ಕಡಿತ ಮಾಡಲಾಗುತ್ತದೆ.

ಫೋನ್ ಅನ್ನು ಯಾರು ಖರೀದಿ ಮಾಡಿರುತ್ತಾರೋ ಅವರೇ ಮರಳಿಸಬೇಕು. 39 ತಿಂಗಳುಗಳ ವರಗೆ ಫೋನ್ ಮರಳಿಸಲು ಅವಕಾಶವಿರುತ್ತದೆ. ಅಂದ್ರೆ ನೀವು ಫೋನ್ ಖರೀದಿ ಮಾಡಿ ಮೂರು ವರ್ಷಗಳಾದ ಬಳಿಕ, ಇನ್ನು 3 ತಿಂಗಳಿನಲ್ಲಿ ಅದನ್ನು ಮರಳಿ ಕೊಡಬೇಕು. ವಾಪಸ್ ಮಾಡುವ ಮುನ್ನ ಡೇಟಾಗಳನ್ನೆಲ್ಲ ಡಿಲೀಟ್ ಮಾಡಿ, ನಿಮ್ಮ ಸಿಮ್ ಕಾರ್ಡ್ ತೆಗೆದಿಟ್ಟುಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...