alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ್ಯಾವ ಕಂಪನಿ ಏನು ಆಫರ್ ನೀಡ್ತಿದೆ? ಇಲ್ಲಿದೆ ಮಾಹಿತಿ….

data

ಟೆಲಿಕಾಂ ಕಂಪನಿಗಳೆಲ್ಲ ಜಿದ್ದಿಗೆ ಬಿದ್ದಂತೆ ಆಫರ್ ಮೇಲೆ ಆಫರ್ ಬಿಡುಗಡೆ ಮಾಡ್ತಿವೆ. ರಿಲಯೆನ್ಸ್ ಜಿಯೋ 84 ದಿನಗಳಿಗೆ 399 ರೂ. ಪ್ಲಾನ್ ಬಿಡುಗಡೆ ಮಾಡಿದ್ದೇ ತಡ, ಏರ್ಟೆಲ್ ಕೂಡ 70 ದಿನ ಇದ್ದ ವ್ಯಾಲಿಡಿಟಿಯನ್ನು 84 ದಿನಗಳಿಗೆ ಹೆಚ್ಚಿಸಿದೆ.

399 ರೂ. ರೀಚಾರ್ಜ್ ಮಾಡಿದ್ರೆ ಪ್ರತಿದಿನ 1 ಜಿಬಿ 4ಜಿ ಡೇಟಾ ಹಾಗೂ ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿ ಡಿ ಕರೆಗಳು ದೊರೆಯಲಿವೆ. 4ಜಿ ಸಿಮ್ ಹಾಗೂ ಸ್ಮಾರ್ಟ್ ಫೋನ್ ಹೊಂದಿರುವವರಿಗೆ ಈ ಆಫರ್ ಲಭ್ಯವಿದೆ. 84 ಜಿಬಿ ಡೇಟಾಗೂ ಪ್ರತ್ಯೇಕ ಪ್ಲಾನ್ ಇದೆ. ಇದಕ್ಕಾಗಿ ಗ್ರಾಹಕರು 293 ರೂ. ರೀಚಾರ್ಜ್ ಮಾಡಬೇಕು.

ರಿಲಯೆನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರು 399 ರೂ. ರೀಚಾರ್ಜ್ ಮಾಡಿದ್ರೆ ಪ್ರತಿದಿನ 1 ಜಿಬಿ ಡೇಟಾ ದೊರೆಯುತ್ತದೆ. ಈ ಪ್ಲಾನ್ ಗೆ 84 ದಿನಗಳ ವ್ಯಾಲಿಡಿಟಿ ಇದೆ, ರೋಮಿಂಗ್ ಕರೆಗಳು ಕೂಡ ಉಚಿತ. 309 ಮತ್ತು 349 ರೂ. ಪ್ಲಾನ್ ಗಳ ವ್ಯಾಲಿಡಿಟಿಯನ್ನು ಕೂಡ 56 ದಿನಗಳಿಗೆ ಹೆಚ್ಚಿಸಲಾಗಿದೆ.

ವೊಡಾಫೋನ್ ಸ್ಟೂಡೆಂಟ್ ಪ್ಲಾನ್ ನಲ್ಲಿ 445 ರೂ. ರೀಚಾರ್ಜ್ ಮಾಡಿದ್ರೆ 84 ದಿನಗಳ ವ್ಯಾಲಿಡಿಟಿ ಇರುತ್ತದೆ. ಎರಡನೇ ಬಾರಿಗೆ ನಿಮ್ಮ ರೀಚಾರ್ಜ್ ಮೊತ್ತ ಕಡಿಮೆಯಾಗಲಿದ್ದು, 352 ರೂ. ಗೆ ಇಳಿಕೆಯಾಗುತ್ತದೆ. ಓಲಾ ಮತ್ತು ಜೊಮೇಟೋ ಮೇಲೂ ರಿಯಾಯಿತಿ ಸಿಗಲಿದೆ.

ಐಡಿಯಾ ಸೆಲ್ಯುಲಾರ್ ನಲ್ಲೂ 84 ದಿನಗಳ ವ್ಯಾಲಿಡಿಟಿ ಪ್ಯಾಕ್ ಇದೆ. ಆದ್ರೆ ಇದು ಮೊದಲ ಬಾರಿ ರೀಚಾರ್ಜ್ ಮಾಡುವ ಗ್ರಾಹಕರಿಗೆ ಮಾತ್ರ ಲಭ್ಯ. 453 ರೂ. ರೀಚಾರ್ಜ್ ಮಾಡಿದ್ರೆ ಪ್ರತಿದಿನ 1 ಜಿಬಿ 3ಜಿ ಡೇಟಾ ಹಾಗೂ ಉಚಿತ ಕರೆಗಳನ್ನು ಪಡೆಯಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...