alex Certify
ಕನ್ನಡ ದುನಿಯಾ       Mobile App
       

Kannada Duniya

ದೊಡ್ಡ ಯಶಸ್ಸಿನ ನಂತ್ರ ಮತ್ತೊಂದು ಗಿಫ್ಟ್ ನೀಡಲಿದೆ ಜಿಯೋ

jio1

ರಿಲಾಯನ್ಸ್ ಅಂಗಸಂಸ್ಥೆ ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ತನ್ನ ಉದ್ಯೋಗಿಗಳಿಗೆ ಗಿಫ್ಟ್ ನೀಡಲು ಮುಂದಾಗಿದೆ. ತನ್ನ ಕಂಪನಿಯ 30 ಸಾವಿರ ಉದ್ಯೋಗಿಗಳಿಗೆ ಷೇರು ನೀಡುವ ಯೋಚನೆಯಲ್ಲಿದೆ.

ಮಾಧ್ಯಮಗಳ ವರದಿ ಪ್ರಕಾರ, ಮೊದಲು ಹಿರಿಯ ಸಿಬ್ಬಂದಿಗೆ ರಿಲಾಯನ್ಸ್ ಜಿಯೋ ಕಂಪನಿ ಷೇರು ನೀಡಲಿದೆ. ನಂತ್ರ ಉಳಿದ ಉದ್ಯೋಗಿಗಳ ಬಗ್ಗೆ ಚಿಂತನೆ ನಡೆಸಲಿದೆ. ಟೆಲಿಕಾಂ ಕಂಪನಿಯ ಎರಡು ದೊಡ್ಡ ಕಂಪನಿಗಳಾದ ಐಡಿಯಾ ಮತ್ತು ಏರ್ಟೆಲ್ ಕೂಡ ತನ್ನ ಕೆಲಸಗಾರರನ್ನು ಹಿಡಿದಿಟ್ಟುಕೊಳ್ಳಲು ಈ ರೀತಿ ಟ್ರಿಕ್ ಬಳಸುತ್ತದೆ.

ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ರಿಲಾಯನ್ಸ್ ಜಿಯೋ ಕೂಡ ಉದ್ಯೋಗಿಗಳಿಗೆ ಷೇರು ನೀಡಲು ನಿರ್ಧರಿಸಿದೆ. 2016 ರಲ್ಲಿ ಟೆಲಿಕಾಂ ಕಂಪನಿಯಲ್ಲಿ ಸಂಚಲನ ಮೂಡಿಸಿದ್ದ ಜಿಯೋ ಗ್ರಾಹಕರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ವೆಲ್ ಕಂ ಆಫರ್ ನಂತ್ರ ಈಗ ನ್ಯೂ ಇಯರ್ ಆಫರ್ ನೀಡ್ತಾ ಇದ್ದು, ಜೊತೆಗೆ ಮಾರ್ಚ್ 31ರ ನಂತ್ರ ಇನ್ಯಾವ ಆಫರ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...