alex Certify
ಕನ್ನಡ ದುನಿಯಾ       Mobile App
       

Kannada Duniya

ನೋಕಿಯಾದ ಈ ಹ್ಯಾಂಡ್ ಸೆಟ್ ಗೆ ಜಿಯೋ ನೀಡ್ತಿದೆ 100 ಜಿಬಿ ಡೇಟಾ

ವೇಗವಾಗಿ ಬೆಳೆಯುತ್ತಿರುವ ಟೆಲಿಕಾಂ ಕಂಪನಿ ರಿಲಾಯನ್ಸ್ ಜಿಯೋ, ನೋಕಿಯಾ ಜೊತೆ ಒಪ್ಪಂದ ಮಾಡಿಕೊಂಡಿದೆ. ನೋಕಿಯಾದ ಕೆಲ ಹ್ಯಾಂಡ್ ಸೆಟ್ ಖರೀದಿ ಮಾಡುವ ಗ್ರಾಹಕರಿಗೆ 100 ಜಿಬಿ ಡೇಟಾ ನೀಡ್ತಿದೆ. ಹೆಚ್ ಎಂ ಡಿ ಗ್ಲೋಬಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಜಿಯೋ ನೋಕಿಯಾ 8 ಹಾಗೂ ನೋಕಿಯಾ 5 ಹ್ಯಾಂಡ್ ಸೆಟ್ ಗೆ 100 ಜಿಬಿ ಹಾಗೂ 50 ಜಿಬಿ ಡೇಟಾ ನೀಡ್ತಿದೆ.

ಇದಕ್ಕಿಂತ ಮೊದಲು ಜಿಯೋ ಸ್ಯಾಮ್ಸಂಗ್, ಕ್ಸಿಯಾಮಿ, ಆಸುಸ್, ವಿವೋ ಮತ್ತು ಒಪ್ಪೂ ಬ್ರ್ಯಾಂಡ್ ಗಳ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಈಗ ನೋಕಿಯಾ ಹ್ಯಾಂಡ್ ಸೆಟ್ ಖರೀದಿ ಮಾಡುವ ಗ್ರಾಹಕರಿಗೆ ಜಿಯೋ ಡೇಟಾ ನೀಡಲಿದೆ. ನೋಕಿಯಾ 8 ಮತ್ತು ನೋಕಿಯಾ 5 ಹ್ಯಾಂಡ್ ಸೆಟ್ ಖರೀದಿ ಮಾಡುವ ಗ್ರಾಹಕರಿಗೆ ಈ ಲಾಭ ಸಿಗಲಿದೆ. ಈ ಒಪ್ಪಂದದಿಂದ ನೋಕಿಯಾ 6 ಮತ್ತು ನೋಕಿಯಾ 3 ಹೊರಗಿದೆ.

ನೋಕಿಯಾ 8 ಹಾಗೂ ನೋಕಿಯಾ 5 ಹ್ಯಾಂಡ್ ಸೆಟ್ ಖರೀದಿ ಮಾಡಿದ ಗ್ರಾಹಕರು 309 ರೂಪಾಯಿ ರಿಚಾರ್ಜ್ ಮಾಡಬೇಕಾಗುತ್ತದೆ. ನೋಕಿಯಾ 8 ಗ್ರಾಹಕರಿಗೆ ಪ್ರತಿದಿನ 10 ಜಿಬಿ ಡೇಟಾ ಸಿಗಲಿದೆ. ನೋಕಿಯಾ 5 ಹ್ಯಾಂಡ್ ಸೆಟ್ ಗ್ರಾಹಕರಿಗೆ 5ಜಿಬಿ ಡೇಟಾ ಸಿಗಲಿದೆ. 10 ತಿಂಗಳ ಕಾಲ ಈ ಡೇಟಾ ಲಭ್ಯವಾಗಲಿದೆ. ಆಗಸ್ಟ್ 31,2018 ರವರೆಗೆ ಗ್ರಾಹಕರು ಇದ್ರ ಲಾಭ ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...