alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗ್ರಾಹಕರಿಗೆ ಹೊಸ ಆಫರ್, ಬದಲಾಗಿದೆ ಹಳೆ ಪ್ಲಾನ್….

jio

ಟೆಲಿಕಾಂ ಕಂಪನಿಗಳಲ್ಲಿ ನಡುಕ ಹುಟ್ಟಿಸಿರುವ ರಿಲಯೆನ್ಸ್ ಜಿಯೋ ಇನ್ನೊಂದಷ್ಟು ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಜುಲೈ 15ರಂದು ಧನ್ ಧನಾ ಧನ್ ಆಫರ್ ಮುಕ್ತಾಯವಾಗಲಿದ್ದು, ಬಳಕೆದಾರರು 309 ಅಥವಾ 509 ರೂಪಾಯಿ ಪ್ಲಾನ್ ಅನ್ನು ರೀಚಾರ್ಜ್ ಮಾಡಿಕೊಳ್ಳಬಹುದಿತ್ತು. ಅವುಗಳಿಗೆ ಕೇವಲ 28 ದಿನಗಳ ವ್ಯಾಲಿಡಿಟಿ ಇತ್ತು.

ಈಗ ಜಿಯೋ 309 ಮತ್ತು 509 ರೂಪಾಯಿ ಪ್ಲಾನನ್ನು ಕೂಡ ಬದಲಾವಣೆ ಮಾಡಿದೆ. ಜಿಯೋ ಪ್ರೈಮ್ ಗ್ರಾಹಕರಿಗಾಗಿ 399 ರೂಪಾಯಿ ಪ್ಲಾನ್ ನೀಡುತ್ತಿದೆ. ಇದರಲ್ಲಿ 84 ದಿನಗಳವರೆಗೆ ಪ್ರತಿದಿನ 1 ಜಿಬಿ ಡೇಟಾ ದೊರೆಯಲಿದೆ. ಇನ್ನೊಂದು 349 ರೂ. ಪ್ಲಾನ್. ಇದರಲ್ಲಿ 56 ದಿನಗಳಿಗೆ 20 ಜಿಬಿ ಡೇಟಾ ದೊರೆಯಲಿದೆ.

309 ಮತ್ತು 509 ರೂಪಾಯಿಯ ಪ್ಲಾನ್ ನಲ್ಲಿ ವ್ಯಾಲಿಡಿಟಿಯನ್ನು 56 ದಿನಗಳಿಗೆ ಹೆಚ್ಚಿಸಲಾಗಿದೆ. 999 ರೂ. ಪ್ಲಾನ್ ನಲ್ಲೂ ಬದಲಾವಣೆ ಮಾಡಿದ್ದು, 90 ದಿನಗಳಿಗೆ 60 ಜಿಬಿ ಬದಲು 90 ಜಿಬಿ ಡೇಟಾ ನೀಡಲಾಗುತ್ತಿದೆ. 1999 ರೂ. ಪ್ಲಾನ್ ನಲ್ಲಿ 120 ದಿನಗಳ ವ್ಯಾಲಿಡಿಟಿ ಇದ್ದು, ಡೇಟಾವನ್ನು 125 ಜಿಬಿಯಿಂದ 155 ಜಿಬಿಗೆ ಏರಿಕೆ ಮಾಡಲಾಗಿದೆ.

4999 ರೂ. ಪ್ಲಾನ್ ಅಡಿಯಲ್ಲಿ 210 ದಿನಗಳ ವ್ಯಾಲಿಡಿಟಿ ಹಾಗೂ 350 ಜಿಬಿ ಡೇಟಾ ದೊರೆಯಲಿದೆ. 9999 ರೂ. ಪ್ಲಾನ್ ರೀಚಾರ್ಜ್ ಮಾಡಿಕೊಂಡಲ್ಲಿ 390 ದಿನಗಳ ವ್ಯಾಲಿಡಿಟಿ ಹಾಗೂ 780 ಜಿಬಿ ಡೇಟಾ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...