alex Certify
ಕನ್ನಡ ದುನಿಯಾ       Mobile App
       

Kannada Duniya

ಅನಿಲ್ ಅಂಬಾನಿ-ಎಸ್‌ಬಿಐ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ನಕಾರ

ಅನಿಲ್ ಅಂಬಾನಿ ಒಡೆತನದ ಆರ್-ಕಾಂ ನಷ್ಟದಲ್ಲಿದ್ದು, ಕೋಟ್ಯಂತರ ರೂ. ಸಾಲ ಮರುಪಾವತಿ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣದಲ್ಲಿ ಅನಿಲ್ ಅಂಬಾನಿಗೆ ಹಿನ್ನಡೆಯಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸುಮಾರು 260 ಕೋಟಿ ರೂ. ತೆರಿಗೆ ಹಣವನ್ನು ವಾಪಾಸು ಹಿಂದಿರುಗಿಸಲು ಸೂಚನೆ ನೀಡಬೇಕೆಂದು, ನ್ಯಾಷನಲ್ ಕಂಪನಿ ಲಾ ಅಪಿಲೆಂಟ್ ಟ್ರಿಬ್ಯೂನಲ್ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಟ್ರಿಬ್ಯೂನಲ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ‌ ಎಂದು ಸ್ಪಷ್ಟಪಡಿಸಿದೆ.

ಈ ತೀರ್ಪಿನಿಂದ ಆರ್-ಕಾಂ ಸಂಸ್ಥೆಗೆ ಹಿನ್ನಡೆಯಾಗಿದ್ದು, ಸ್ವೀಡಿಶ್ ‌ಮೂಲದ ಗೇರ್ ಸಂಸ್ಥೆಗೆ ಬಾಕಿ ಮೊತ್ತ ಪಾವತಿಸಬೇಕಿದೆ. ಈ ಬಗ್ಗೆ ಶುಕ್ರವಾರ ನಿಲುವು ಪ್ರಕಟಿಸಿರುವ‌ ನ್ಯಾಯಪೀಠ, ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ವಿಚಾರಣೆ ಇರುವಾಗ ಮಧ್ಯಂತರ ತೀರ್ಪು ನೀಡಲು ಸಾಧ್ಯವಿಲ್ಲ. ಸಂಸ್ಥೆ ಅಗತ್ಯವಿದ್ದರೆ, ಸುಪ್ರೀಂ‌ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿ‌ ಎಂದಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...