alex Certify
ಕನ್ನಡ ದುನಿಯಾ       Mobile App
       

Kannada Duniya

ಡೆಬಿಟ್ ಕಾರ್ಡ್ ಬಳಕೆದಾರರಿಗೊಂದು ಸುದ್ದಿ

rbi-card

ಮುಂಬೈ: ಡೆಬಿಟ್ ಕಾರ್ಡ್ ವ್ಯವಹಾರಕ್ಕೆ ಸಂಬಂಧಿಸಿದಂತೆ, ವರ್ತಕರಿಗೆ ವಿಧಿಸುವ ಶುಲ್ಕದಲ್ಲಿ ಕಡಿತ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಮುಂದಾಗಿದೆ.

ನಗದು ರಹಿತ ವ್ಯವಹಾರಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಆದರೆ, ಡೆಬಿಟ್ ಕಾರ್ಡ್ ಬಳಕೆಗೆ ಬ್ಯಾಂಕ್ ಗಳು ಶುಲ್ಕ ವಿಧಿಸುತ್ತವೆ ಎಂದು ದೂರುಗಳು ಕೇಳಿಬಂದಿದ್ದವು.

ಇದಕ್ಕೆ ಸ್ಪಂದಿಸಿರುವ ಆರ್.ಬಿ.ಐ. ಡೆಬಿಟ್ ಕಾರ್ಡ್ ವಹಿವಾಟಿನ ಶುಲ್ಕವನ್ನು ಏಪ್ರಿಲ್ 1 ರಿಂದ ಕಡಿಮೆ ಮಾಡಿ ನಿಯಮ ಜಾರಿಗೊಳಿಸಲಿದೆ.

ಸ್ವೈಪಿಂಗ್ ಮೆಷಿನ್ ಮೂಲಕ ಡೆಬಿಟ್ ಕಾರ್ಡ್ ವ್ಯವಹಾರ ನಡೆಸಿದಲ್ಲಿ ಶೇ. 0.75 ರಷ್ಟು ಸರ್ವೀಸ್ ಟ್ಯಾಕ್ಸ್ ಅನ್ನು ಬ್ಯಾಂಕ್ ಗಳು ಕಡಿತಗೊಳಿಸುತ್ತವೆ.ಇದರ ಬದಲಿಗೆ ಶೇ. 0.40 ರಷ್ಟು ಸೇವಾ ಶುಲ್ಕವನ್ನು ವರ್ತಕರಿಂದ ಸಂಗ್ರಹಿಸಲು ಆರ್.ಬಿ.ಐ. ಸೂಚನೆ ನೀಡಿದೆ.

ಸದ್ಯ 2000 ರೂ. ವರೆಗಿನ ಡೆಬಿಟ್ ಕಾರ್ಡ್ ವ್ಯವಹಾರಕ್ಕೆ ಶೇ. 0.75 ರಷ್ಟು ಹಾಗೂ 2000 ರೂ. ಮೇಲ್ಪಟ್ಟ ವ್ಯವಹಾರಕ್ಕೆ ಶೇ. 1 ರಷ್ಟು ಸೇವಾ ಶುಲ್ಕ ವಿಧಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...