alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲ ಪಡೆಯುವವರಿಗೆ ‘ಶಾಕ್’: ದುಬಾರಿಯಾಗಲಿದೆ ಬಡ್ಡಿ ದರ…?

ಬ್ಯಾಂಕ್‍ಗಳಿಂದ ಸಾಲ ತೆಗೆದುಕೊಳ್ಳುವುದು ಖಾತೆದಾರರಿಗೆ ಇನ್ನು ದುಬಾರಿಯಾಗುವ ಸಾಧ್ಯತೆಗಳಿವೆ. ಇಂಥದ್ದೊಂದು ಸುಳಿವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಬುಧವಾರ ನಡೆಸಿರುವ ಹಣಕಾಸು ನೀತಿ ಪರಿಶೀಲನಾ ಸಭೆ ಹೊರಹಾಕಿದೆ.

ಹಣಕಾಸು ನೀತಿ ಪರಿಶೀಲನೆ ಸಂಬಂಧ ನಡೆದ ಈ ಸಭೆಯಲ್ಲಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಅಂದರೆ ಶೇ. 6.5ರಲ್ಲಿ ಇಟ್ಟುಕೊಳ್ಳುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿ ಎಲ್ಲ ರೀತಿಯ ಸಾಲಗಳ ಬಡ್ಡಿದರ ಹೆಚ್ಚಿಸುವ ಕುರಿತು ಪರಿಶೀಲನಾ ಸಭೆಯಲ್ಲಿ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.

ಭಾರತೀಯ ಸ್ಟೇಟ್ ಬ್ಯಾಂಕ್, ಎಚ್‍ಡಿಎಫ್‍ಸಿ ಮತ್ತು ಐಸಿಐಸಿಐ ಬ್ಯಾಂಕ್‍ಗಳು ಕೆಲ ದಿನಗಳ ಹಿಂದೆ ಸಾಲದ ಬಡ್ಡಿದರಗಳನ್ನು ಹೆಚ್ಚಿಸಿದ್ದವು. ಇನ್ನು ಮತ್ತೆ ಬಡ್ಡಿದರ ಹೆಚ್ಚಾದರೆ ಎಲ್ಲ ರೀತಿಯ ಸಾಲ ದುಬಾರಿ ಆಗುವ ಸಾಧ್ಯತೆ ಇರುವುದರಿಂದ ಬ್ಯಾಂಕ್ ಗ್ರಾಹಕರು ಮುಂದಿನ ಬೆಳವಣಿಗೆಗಳನ್ನು ಕುತೂಹಲದಿಂದ ಕಾಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...