alex Certify
ಕನ್ನಡ ದುನಿಯಾ       Mobile App
       

Kannada Duniya

ಇ-ಕಾಮರ್ಸ್ ಕ್ಷೇತ್ರಕ್ಕೂ ಎಂಟ್ರಿ ಕೊಡಲು ಸಜ್ಜಾದ ‘ಪತಂಜಲಿ’

ram1

ಯೋಗ ಗುರು ಬಾಬಾ ರಾಮದೇವ್ ಪ್ರಾಯೋಜಿತ ಪತಂಜಲಿ ಆಯುರ್ವೇದ ತನ್ನ ಭವಿಷ್ಯದ ಯೋಜನೆಗಳನ್ನು ಬಿಚ್ಚಿಟ್ಟಿದೆ. 2017ರ ವೇಳೆಗೆ ದೇಶಾದ್ಯಂತ 30 ಲಕ್ಷ ಮಳಿಗೆಗಳು ಮತ್ತು 1 ಲಕ್ಷ ಕೋಟಿ ಮೌಲ್ಯದ ಕಾರ್ಖಾನೆಗಳನ್ನು ಹೊಂದುವುದು ಪತಂಜಲಿ ಮುಂದಿರುವ ಗುರಿ.

ಇ-ಕಾಮರ್ಸ್ ವ್ಯಾಪಾರಕ್ಕೂ ಭರ್ಜರಿ ಎಂಟ್ರಿ ಕೊಡಲು ಪತಂಜಲಿ ಸಜ್ಜಾಗಿದೆ. ಹರಿದ್ವಾರ ಮೂಲದ ಪತಂಜಲಿ ಕಂಪನಿ ಆಸ್ಸಾಂನಲ್ಲಿ ಉತ್ಪಾದನಾ ಘಟಕಗಳನ್ನು ಆರಂಭಿಸುತ್ತಿದೆ. ಇದಕ್ಕಾಗಿ 1200 ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ. ಈ ಘಟಕದಲ್ಲಿ ವರ್ಷಕ್ಕೆ 10 ಲಕ್ಷ ಟನ್ ಪದಾರ್ಥಗಳನ್ನು ಉತ್ಪಾದಿಸಲಾಗುತ್ತದೆ.

ಇದು ಭಾರತದಲ್ಲಿರುವ ಪತಂಜಲಿಯ ಅತಿ ದೊಡ್ಡ ಘಟಕ. ಮುಂದಿನ ಮಾರ್ಚ್ ವೇಳೆಗೆ ‘ಪತಂಜಲಿ ಹರ್ಬಲ್ & ಮೆಗಾ ಫುಡ್ ಪಾರ್ಕ್’ ಕಾರ್ಯಾರಂಭ ಮಾಡಲಿದೆ. ಪತಂಜಲಿ ದೇಶಾದ್ಯಂತ ಸುಮಾರು 50 ಉತ್ಪಾದನಾ ಘಟಕಗಳನ್ನು ಹೊಂದಿದೆ. ಗುವಾಹಟಿಯಲ್ಲಿ ಮಾತನಾಡಿದ ಬಾಬಾ ರಾಮ್ ದೇವ್ ಸಂಸ್ಥೆಯ ಮುಂದಿನ ಯೋಜನೆಗಳನ್ನು ಬಹಿರಂಗಪಡಿಸಿದ್ರು. ಈಗಾಗ್ಲೇ 5000 ಪತಂಜಲಿ ಮಳಿಗೆಗಳಿದ್ದು, 10 ಲಕ್ಷ ಅಂಗಡಿಗಳಲ್ಲಿ ಪತಂಜಲಿ ಉತ್ಪನ್ನ ಲಭ್ಯವಿದೆ. ಅದನ್ನು 30 ಲಕ್ಷಕ್ಕೇರಿಸುವುದು ಅವರ ಉದ್ದೇಶ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...