alex Certify
ಕನ್ನಡ ದುನಿಯಾ       Mobile App
       

Kannada Duniya

ಭಗವಂತನಿಗಾಗಿ ನೆಲಸಮಗೊಳ್ಳಲಿದೆ 300 ಕೋಟಿ ಮೌಲ್ಯದ ಹೊಟೇಲ್

hotel-trident

ರಾಜಸ್ಥಾನದ ವಸುಂಧರಾ ರಾಜೇ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಸುಮಾರು 300 ಕೋಟಿ ಮೌಲ್ಯದ ಫೈವ್ ಸ್ಟಾರ್ ಹೊಟೇಲ್ ಉರುಳಿಸುವ ಮಹತ್ವದ ಆದೇಶ ನೀಡಿದೆ.

ಈ ಹೊಟೇಲ್ ಪಾರಂಪರಿಕ ಜಾಗ ಜಲಮಹಲ್ ಪಕ್ಕದಲ್ಲಿ ಕಟ್ಟಲಾಗಿತ್ತು. ರಾಜಸ್ಥಾನದ ಹೈಕೋರ್ಟ್ ತೀರ್ಪಿನ ನಂತ್ರ ರಾಜ್ಯ ಸರ್ಕಾರ ಈ ಆದೇಶ ನೀಡಿದೆ. ಹೊಟೇಲ್ ಟ್ರೈಡೆಂಟ್ ನ ಗುತ್ತಿಗೆಯನ್ನು ರದ್ದು ಪಡಿಸುವಂತೆ ಸೂಚನೆ ನೀಡಲಾಗಿದೆ. ಕಲ್ಯಾಣ ಮಂದಿರದ ಈ ಜಾಗವನ್ನು ಅಧಿಕಾರಿಗಳು ಗುತ್ತಿಗೆ ನೀಡಿದ್ದರು. ನಂತ್ರ ಒಬೆರಾಯ್ ಗ್ರೂಪ್ ಟ್ರೈಡೆಂಟ್ ಹೊಟೇಲ್ ನಿರ್ಮಾಣ ಮಾಡಿತ್ತು.

ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ದೇವಸ್ಥಾನದ ಪರ ತೀರ್ಪು ನೀಡಿತ್ತು. ದೇವರಿಗೆ ಭೂಮಿ ವಾಪಸ್ ನೀಡುವಂತೆ ಆದೇಶಿಸಿತ್ತು. ಕೋರ್ಟ್ ಆದೇಶದ ನಂತ್ರ ಭಗವಂತನ ಜಮೀನನ್ನು ಭಗವಂತನಿಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 22 ವರ್ಷಗಳ ಕಾನೂನು ಹೋರಾಟದ ನಂತ್ರ 300 ಕೋಟಿ ರೂಪಾಯಿ ಮೌಲ್ಯದ ಹೊಟೇಲ್ ಉರುಳಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...