alex Certify
ಕನ್ನಡ ದುನಿಯಾ       Mobile App
       

Kannada Duniya

2000 ರೈಲು ನಿಲ್ದಾಣಗಳಲ್ಲಿ ಕ್ಲೌಡ್ ನಿಯಂತ್ರಿತ ಟಿವಿ ಡಿಸ್ ಪ್ಲೇ

train

ಭಾರತೀಯ ರೈಲ್ವೆ ಇಲಾಖೆ ತಂತ್ರಜ್ಞಾನಕ್ಕೆ ಸಾಕಷ್ಟು ಒತ್ತು ನೀಡುತ್ತಿದೆ. ನಿಗದಿತ ಸಮಯಕ್ಕೆ ಯೋಜನೆ ಪೂರ್ಣಗೊಂಡ್ರೆ ರೈಲು ಡಿಸ್ ಪ್ಲೇ ನೆಟ್ವರ್ಕ್ ಸಿಸ್ಟಮ್  2175 ರೈಲ್ವೆ ನಿಲ್ದಾಣಗಳಲ್ಲಿ ಮುಂದಿನ ಮಾರ್ಚ್ ಒಳಗೆ ಕಾರ್ಯಾರಂಭ ಮಾಡಲಿದೆ.

ಈ ಟಿವಿ ಪರದೆಗಳು ಕ್ಲೌಡ್ ನಿಯಂತ್ರಿತವಾಗಿರುತ್ತವೆ, ಎಲ್ಲಾ ಕಡೆ ಏಕಕಾಲಕ್ಕೆ ಒಂದೇ ವಿಷಯವನ್ನು ಟೆಲಿಕಾಸ್ಟ್ ಮಾಡಬಹುದು. ಬೇರೆ ಬೇರೆ ಪರದೆಗಳಲ್ಲಿ ಬೇರೆ ಕಂಟೆಂಟ್ ಗಳನ್ನು ಬೇರೆ ಭಾಷೆಗಳಲ್ಲಿ ಪ್ರಸಾರ ಮಾಡುವ ಆಯ್ಕೆ ಕೂಡ ಇದೆ.

ಶೇ.50 ರಷ್ಟು ವಿಷಯಗಳು ಇಲಾಖೆಗೆ ಸಂಬಂಧಪಟ್ಟವಾಗಿರುತ್ತವೆ, ರೈಲುಗಳ ಆಗಮನ, ನಿರ್ಗಮನದ ಬಗ್ಗೆ ಮಾಹಿತಿ ಇರುತ್ತದೆ. ಆರ್ ಡಿ ಎನ್ ಪರದೆಗಳಿಗೆ ಧ್ವನಿ ಮತ್ತು ದೃಶ್ಯ ಸಾಮರ್ಥ್ಯವಿದೆ. ರೈಲ್ವೆಗೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳು, ಲೈಫ್ ಸ್ಟೈಲ್, ಆರೋಗ್ಯ ಮತ್ತು ಮನರಂಜನೆಗೆ ಸಂಬಂಧಿಸಿದವುಗಳನ್ನು ಈ ಸ್ಕ್ರೀನ್ ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಈ ಯೋಜನೆಯ ವೆಚ್ಚ 2000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...