alex Certify
ಕನ್ನಡ ದುನಿಯಾ       Mobile App
       

Kannada Duniya

ಇದರಲ್ಲೂ 100 ಕೋಟಿ ರೂ. ಸಂಗ್ರಹಿಸಿದೆ ರೈಲ್ವೇ ಇಲಾಖೆ

ಹಲವು ಸುಧಾರಣೆ ಕ್ರಮಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಕೇಂದ್ರ ರೈಲ್ವೇ ಇಲಾಖೆ, 7 ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ 100 ಕೋಟಿ ರೂ. ಸಂಗ್ರಹಿಸಿದೆ.

ಏಪ್ರಿಲ್ ನಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ಟಿಕೆಟ್ ಇಲ್ಲದ ಪ್ರಯಾಣ, ಬುಕ್ ಮಾಡದೇ ಸಾಮಾನು ಸಾಗಾಟ ಮಾಡಿದ ಇವೇ ಮೊದಲಾದ ಕಾರಣಕ್ಕೆ ಪ್ರಯಾಣಿಕರಿಂದ 100 ಕೋಟಿ ರೂ. ಸಂಗ್ರಹಿಸಲಾಗಿದೆ.

ರೈಲ್ವೇ ವಾಣಿಜ್ಯ ವಿಭಾಗ ನಡೆಸಿದ ಕಾರ್ಯಾಚರಣೆಯಲ್ಲಿ ಇಷ್ಟೊಂದು ಮೊತ್ತ ಹೆಚ್ಚಾಗಿದೆ. ತಪಾಸಣೆ ವೇಳೆ ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣಿಸುವುದು ಕಂಡು ಬಂದಿದ್ದು, ದಂಡ ವಿಧಿಸಲಾಗಿದೆ.

7 ತಿಂಗಳ ಅವಧಿಯಲ್ಲಿ 19.82 ಲಕ್ಷ ಕೇಸ್ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16.37 ಲಕ್ಷ ಪ್ರಕರಣ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 21.08 ರಷ್ಟು ಹೆಚ್ಚಾಗಿದೆ.

ಸೆಂಟ್ರಲ್ ರೈಲ್ವೇ  ಪ್ರಯಾಣಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಂಡಿದೆ. ಇದೇ ವೇಳೆ ಟಿಕೆಟ್ ರಹಿತ ಪ್ರಯಾಣವನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...