alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್! ಏರಿಕೆಯಾಗಲಿದೆ ಇಂಧನ, ಉತ್ಪನ್ನಗಳ ದರ

ನವದೆಹಲಿ: ಆಘಾತಕಾರಿ ಸುದ್ದಿಯೊಂದು ಇಲ್ಲಿದೆ. ನವೆಂಬರ್ ನಿಂದ ರೆಫ್ರಿಜರೇಟರ್, ಏಸಿ, ಏರ್ ಟಿಕೆಟ್, ವಾಷಿಂಗ್ ಮೆಷಿನ್, ಹೋಟೆಲ್ ವೆಚ್ಚ, ಇಂಧನ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60 ರೂ. ಏರಿಕೆಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿಯೂ ಬೆಲೆ ಹೆಚ್ಚಾಗಲಿದೆ.

ಇನ್ನು ಜಿ.ಎಸ್.ಟಿ. ಅಡಿ ಇನ್ ಫುಟ್ ಕ್ರೆಡಿಟ್ ನೀಡದೆಯೇ ತೆರಿಗೆ ದರವನ್ನು ಶೇ. 18 ರಿಂದ ಶೇ. 12 ಕ್ಕೆ ಇಳಿಕೆ ಮಾಡಿದಲ್ಲಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಊಟೋಪಚಾರದ ಬೆಲೆಯಲ್ಲಿ ಏರಿಕೆಯಾಗಲಿದೆ.

ವೈಮಾನಿಕ ಇಂಧನ ಬೆಲೆಯಲ್ಲಿ ಏರಿಕೆಯಾಗಿರುವುದರಿಂದ ಏರ್ ಟಿಕೆಟ್ ದರದಲ್ಲಿಯೂ ಏರಿಕೆಯಾಗಲಿದೆ. ಮಾಹಿತಿ ಪ್ರಕಾರ ವಿಮಾನ ಟಿಕೆಟ್ ದರದಲ್ಲಿ ಶೇ. 10 ರಿಂದ ಶೇ. 15 ರಷ್ಟು ಏರಿಕೆಯಾಗಲಿದೆ.

ಅದೇ ರೀತಿ ಏಸಿ, ರೆಫ್ರಿಜರೇಟರ್ ಗಳಲ್ಲಿ ಬಳಸುವ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಉತ್ಪನ್ನಗಳ ಬೆಲೆ ಸಹಜವಾಗಿ ಏರಿಕೆಯಾಗಲಿದೆ.

ನವೆಂಬರ್ ನಿಂದ ವಿವಿಧ ಉತ್ಪನ್ನಗಳು, ಸೇವೆಗಳ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದ್ದು, ಗ್ರಾಹಕರಿಗೆ ಹೊರೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...