alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧದಿಂದ ತೆಲಂಗಾಣ ಸರ್ಕಾರಕ್ಕಾಗುತ್ತಿದೆ ಭಾರೀ ನಷ್ಟ

telangala

ನೋಟು ನಿಷೇಧದ ಬಳಿಕ ತೆಲಂಗಾಣ ನಷ್ಟದ ಸುಳಿಗೆ ಸಿಲುಕಿದೆ. ಸರ್ಕಾರದ ಅಂದಾಜಿನ ಪ್ರಕಾರ ತಿಂಗಳಿಗೆ 1000-1500 ಕೋಟಿ ರೂಪಾಯಿ ಆದಾಯ ಖೋತಾ ಆಗ್ತಿದೆ ಅಂತಾ ಹಣಕಾಸು ಸಚಿವ ಎಟೆಲಾ ರಾಜೇಂದರ್ ತಿಳಿಸಿದ್ದಾರೆ.

ಇದೇ ರೀತಿ ಎಷ್ಟು ಸಮಯದವರೆಗೆ ಮುಂದುವರಿಯಲಿದೆ ಅನ್ನೋದು ಗೊತ್ತಿಲ್ಲ, ಕಡಿಮೆ ಮುಖಬೆಲೆಯ ನೋಟುಗಳು ಲಭ್ಯವಾದ್ರೆ ಮಾತ್ರ ಸಮಸ್ಯೆ ಪರಿಹಾರವಾಗಲಿದೆ ಅನ್ನೋದು ಅವರ ವಿಶ್ವಾಸ. ಬಹುಷಃ ಇನ್ನಾರು ತಿಂಗಳು ಆದಾಯ ನಷ್ಟ ಖಚಿತ ಎಂದಿದ್ದಾರೆ.

ಸ್ಟಾಂಪ್, ರಿಜಿಸ್ಟ್ರೇಶನ್, ಮೋಟಾರು ವಾಹನ ಮತ್ತು ವಾಣಿಜ್ಯ ತೆರಿಗೆ ಸಂಗ್ರಹದ ಮೇಲೆ ನೋಟು ನಿಷೇಧದಿಂದ ಭಾರೀ ಹೊಡೆತ ಬಿದ್ದಿದೆ. ರಾಜ್ಯದ ಆರ್ಥಿಕತೆ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ವಿವರಿಸಲು ಸಿಎಂ ಚಂದ್ರಶೇಖರ ರಾವ್, ಪ್ರಧಾನಿ ಮೋದಿ ಅವರನ್ನು ಈಗಾಗ್ಲೇ ಭೇಟಿ ಮಾಡಿದ್ದಾರೆ.

ಕೇಂದ್ರದ ಸಾಲ ಮರುಪಾವತಿ ವಿಳಂಬ, ಬಜೆಟ್ ನಿರ್ವಹಣಾ ನಿಯಮದಲ್ಲಿ ಸಡಿಲಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಸಹಕಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ನೋಟು ನಿಷೇಧವನ್ನು ವಿರೋಧಿಸಿ ಸೋಮವಾರ ‘ಆಕ್ರೋಶ್ ದಿವಸ್’ ಹೆಸರಲ್ಲಿ ಪ್ರತಿಭಟನೆಗೆ ಮುಂದಾಗಿರುವ ಪ್ರತಿಪಕ್ಷಗಳ ಜೊತೆ ಕೈಜೋಡಿಸುವುದಿಲ್ಲ ಅಂತಾ ಟಿ ಆರ್ ಎಸ್ ಸ್ಪಷ್ಟಪಡಿಸಿದೆ. ನೋಟು ನಿಷೇಧಿಸಿರುವ ಮೋದಿ ಅವರ ನಿರ್ಧಾರವನ್ನು ಬೆಂಬಲಿಸುವುದಾಗಿ ಹೇಳಿರುವ ಟಿ ಆರ್ ಎಸ್, ಜಾರಿ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಅಗತ್ಯವಿದೆ ಅಂತಾ ಅಭಿಪ್ರಾಯಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...