alex Certify
ಕನ್ನಡ ದುನಿಯಾ       Mobile App
       

Kannada Duniya

ನಿತ್ಯ ದರ ಪರಿಷ್ಕರಣೆಯಿಂದ ಮತ್ತಷ್ಟು ದುಬಾರಿಯಾಗಿದೆ ಪೆಟ್ರೋಲ್, ಡೀಸೆಲ್

ಕಳೆದ 2 ತಿಂಗಳುಗಳಿಂದ ಪೆಟ್ರೋಲ್ ದುಬಾರಿಯಾಗ್ತಾನೇ ಇದೆ. ಜುಲೈನಿಂದ ಇದುವರೆಗೆ ಪೆಟ್ರೋಲ್ ದರ 6 ರೂಪಾಯಿ ಏರಿಕೆ ಕಂಡಿದೆ. ಕಳೆದ ಮೂರು ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಹೆಚ್ಚಳವಾಗಿರೋದು ಇದೇ ಮೊದಲು.

ಜುಲೈನಿಂದ ಈವರೆಗೆ ಡೀಸೆಲ್ ದರ ಕೂಡ 3 ರೂ. 67 ಪೈಸೆ ಹೆಚ್ಚಳವಾಗಿದ್ದು, ಈಗ ಲೀಟರ್ ಡೀಸೆಲ್ ಗೆ 57.03 ರೂಪಾಯಿಯಾಗಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ಈಗ 69.04 ರೂಪಾಯಿ. 2014ರ ನಂತರ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಈ ಮಟ್ಟಕ್ಕೆ ಹೆಚ್ಚಳವಾಗಿದೆ.

ಈ ಮೊದಲು ಪ್ರತಿ ತಿಂಗಳ 1 ಮತ್ತು 16ನೇ ತಾರೀಖಿನಂದು ತೈಲಬೆಲೆ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದ್ರೆ ಕಳೆದ ಜೂನ್ ನಿಂದ ತೈಲ ಕಂಪನಿಗಳು ಜಾಗತಿಕ ದರಕ್ಕೆ ತಕ್ಕಂತೆ ಪ್ರತಿನಿತ್ಯ ಬೆಲೆಯನ್ನು ಪರಿಷ್ಕರಿಸುತ್ತಿವೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಮತ್ತಷ್ಟು ತುಟ್ಟಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...