alex Certify
ಕನ್ನಡ ದುನಿಯಾ       Mobile App
       

Kannada Duniya

ನಿಲ್ಲದ ಬೆಲೆ ಏರಿಕೆ ಬಿಸಿ: ಮತ್ತಷ್ಟು ದುಬಾರಿಯಾಯ್ತು ಪೆಟ್ರೋಲ್-ಡಿಸೇಲ್

ಪೆಟ್ರೋಲ್-ಡಿಸೇಲ್ ಬೆಲೆ ಭಾನುವಾರವೂ ಏರಿಕೆಯಾಗಿದೆ. ಪೆಟ್ರೋಲ್ 17 ಪೈಸೆ ಹಾಗೂ ಡಿಸೇಲ್ 10 ಪೈಸೆ ಹೆಚ್ಚಳವಾಗಿದೆ. ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 82.61 ರೂಪಾಯಿಗೆ ಮಾರಾಟವಾಗ್ತಿದೆ. ಡಿಸೇಲ್ ಬೆಲೆ ಲೀಟರ್ ಗೆ 73.97 ರೂಪಾಯಿಯಾಗಿದೆ.

ಕಳೆದ ಎರಡು ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗ್ತಿತ್ತು. ಡಿಸೇಲ್ ಬೆಲೆ ಸ್ಥಿರವಾಗಿತ್ತು. ಆದ್ರೆ ಭಾನುವಾರ ಪೆಟ್ರೋಲ್ ಜೊತೆ ಡಿಸೇಲ್ ಬೆಲೆಯಲ್ಲೂ ಏರಿಕೆಯಾಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 89.97 ರೂಪಾಯಿಯಾದ್ರೆ ಡಿಸೇಲ್ ಬೆಲೆ ಲೀಟರ್ ಗೆ 78.53 ರೂಪಾಯಿಯಾಗಿದೆ.

ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಯಾಗೋದು ಅನುಮಾನ. ಬೆಲೆ ಇಳಿಕೆಗೆ ನಿರಂತರ ಒತ್ತಾಯ ಕೇಳಿ ಬರ್ತಿದೆ. ರಾಜ್ಯ ಸರ್ಕಾರಗಳು ತೆರಿಗೆ ಇಳಿಸಿ ಜನರಿಗೆ ನೆಮ್ಮದಿ ನೀಡುವ ಪ್ರಯತ್ನ ನಡೆಸುತ್ತಿವೆ. ಕೆಲ ರಾಜ್ಯಗಳಲ್ಲಿ ಈಗಾಗಲೇ ತೆರಿಗೆ ಇಳಿಕೆ ಮಾಡಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...