alex Certify
ಕನ್ನಡ ದುನಿಯಾ       Mobile App
       

Kannada Duniya

ಗರಿಷ್ಠ ಮಟ್ಟಕ್ಕೆ ಏರಿಕೆ ಕಾಣುವ ಮೂಲಕ ವಾಹನ ಸವಾರರಿಗೆ ‘ಶಾಕ್’ ನೀಡಿದ ಪೆಟ್ರೋಲ್-ಡೀಸೆಲ್ ಬೆಲೆ

ದೇಶದ ವಿವಿಧ ನಗರಗಳಲ್ಲಿ ಸೋಮವಾರ ಇಂಧನದ ಬೆಲೆ ಹಿಂದೆಂದೂ ಕಂಡರಿಯದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಚ್ಚಾತೈಲ ಬೆಲೆಯಲ್ಲಿ ಏರಿಕೆ ಹಾಗೂ ಡಾಲರ್‌ ಮುಂದೆ ರೂಪಾಯಿ ಮೌಲ್ಯ ಕುಸಿದ ಹಿನ್ನೆಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಹೆಚ್ಚಳವಾಗಿದೆ.

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ 79.15 ರೂ. ಹಾಗೂ ಡೀಸಲ್‌ ಪ್ರತಿ ಲೀಟರ್‌ಗೆ 71.15 ರೂ. ತಲುಪಿದ್ದು, ಈವರೆಗಿನ ಅತಿ ಗರಿಷ್ಠ ದರ ಎಂಬ ದಾಖಲೆ ಮಾಡಿವೆ.

ಪೆಟ್ರೋಲ್‌ ಮೇ 28ರಂದು ಪ್ರತಿ ಲೀ.ಗೆ 78.43 ರೂ. ತಲುಪಿತ್ತು. ಅದೇ ದಿನ ಮುಂಬಯಿನಲ್ಲಿ ಪೆಟ್ರೋಲ್‌ಗೆ 86.24 ರೂ.ಗಳಿತ್ತು. ಸೋಮವಾರ ಮುಂಬಯಿನಲ್ಲಿ 86.56 ರೂ. ಹಾಗೂ ಡೀಸಲ್‌ ಬೆಲೆ 75.54 ರೂ. ಇದ್ದು, ಈವರೆಗಿನ ಗರಿಷ್ಠ ಮೊತ್ತದ ದಾಖಲೆ ತಲುಪಿದೆ.

ಡೀಸಲ್‌ ದರ ಪ್ರತಿ ಲೀಟರ್‌ಗೆ 39 ಪೈಸೆ ಏರಿಕೆಯಾಗಿದ್ದು. 2017ರ ಜೂನ್‌ನಿಂದ ಪ್ರತಿದಿನ ಇಂಧನ ದರ ಬದಲಾವಣೆಯ ನಿಯಮ ಜಾರಿಗೊಂಡಿದ್ದು, ಇದು ಗರಿಷ್ಟ ಮಟ್ಟದ ಏರಿಕೆಯಾಗಿದೆ.

ಮೆಟ್ರೋ ಸಿಟಿಗಳ ಪೈಕಿ, ರಾಷ್ಟ್ರ ರಾಜಧಾನಿಯಲ್ಲಿ ಅತಿ ಕಡಿಮೆ ಇಂಧನ ಬೆಲೆ ದಾಖಲಾಗಿದೆ. ದೆಹಲಿಯಲ್ಲಿ ವ್ಯಾಟ್‌ ಹಾಗೂ ಮಾರಾಟ ತೆರಿಗೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಬೆಲೆ ಕಡಿಮೆ ಇದೆ. ಮುಂಬಯಿನಲ್ಲಿ, ಆ.26 ರ ಬಳಿಕ ಪ್ರತಿ ಲೀಟರ್‌ ಪೆಟ್ರೋಲ್‌ಗೆ 2 ರೂ. ಹಾಗೂ ಡೀಸಲ್‌ಗೆ 2.42 ರೂ. ಹೆಚ್ಚಳವಾಗಿದೆ.

ಕಚ್ಚಾತೈಲ ಬೆಲೆಯಲ್ಲಿ ಬ್ಯಾರಲ್‌ ಒಂದಕ್ಕೆ 7ಡಾಲರ್‌ ಹೆಚ್ಚಳವಾಗಿದೆ. ಏತನ್ಮಧ್ಯೆ ಸಿಎನ್‌ಜಿ ಹಾಗೂ ಪಿಎನ್‌ಜಿಯಲ್ಲೂ ಕೊಂಚ ಮಟ್ಟದ ಏರಿಕೆ ಕಂಡು ಬಂದಿದೆ. ಸಿಎನ್‌ಜಿಗೆ ಪ್ರತಿ ಕೆಜಿಗೆ 63ಪೈಸೆ ಹಾಗೂ ಮನೆಗಳಿಗೆ ನೀಡುವ ಅನಿಲದಲ್ಲಿ 1.11 ರೂ. ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ಒಂದು ಕೆಜಿ ಸಿಎನ್‌ಜಿಗೆ 42.60 ರೂ. ಹಾಗೂ ಪಿಎನ್‌ಜಿಗೆ 28.25 ರೂ. ನಿಗದಿಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...