alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮೇಲೆ ಪ್ರತಿದಿನ ಬದಲಾಗುತ್ತೆ ಪೆಟ್ರೋಲ್, ಡೀಸೆಲ್ ಬೆಲೆ

a-person-using-petrol-pump

ಮೇ 1ರಿಂದ ಪ್ರತಿನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ವ್ಯತ್ಯಾಸಕ್ಕೆ ಅನುಗುಣವಾಗಿ ಭಾರತದಲ್ಲಿ ಕೂಡ ತೈಲ ಬೆಲೆಯಲ್ಲಿ ಬದಲಾವಣೆ ಮಾಡಲಾಗುತ್ತದೆ.

ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ದೇಶದ ಶೇ.95ರಷ್ಟು ಬಂಕ್ ಗಳನ್ನು ಹೊಂದಿವೆ. 58,000 ಪೆಟ್ರೋಲ್ ಪಂಪ್ ಗಳು ಈ ಕಂಪನಿಗಳ ಒಡೆತನದಲ್ಲಿವೆ.

ಮೇ1ರಿಂದ 5 ಪ್ರಮುಖ ನಗರಗಳಲ್ಲಿ ಪ್ರತಿನಿತ್ಯ ತೈಲ ಬೆಲೆಯಲ್ಲಿ ಬದಲಾವಣೆ ಮಾಡಲಾಗುತ್ತದೆ. ನಿಧಾನವಾಗಿ ಈ ಪ್ರಕ್ರಿಯೆಯನ್ನು ದೇಶಾದ್ಯಂತ ವಿಸ್ತರಿಸಲಾಗುತ್ತದೆ. ಮೊದಲು ಪುದುಚೆರಿ, ಆಂಧ್ರಪ್ರದೇಶದ ವೈಜಾಗ್, ರಾಜಸ್ತಾನದ ಉದಯ್ಪುರ, ಜಾರ್ಖಂಡ್ ನ ಜೆಮ್ ಶೆಡ್ಪುರ ಹಾಗೂ ಚಂಡೀಗಢದಲ್ಲಿ ಪ್ರತಿದಿನ ದರ ಬದಲಾವಣೆಯನ್ನು ಜಾರಿ ಮಾಡಲಾಗುತ್ತದೆ. ಪಂಪ್ ನಿಂದ ಪಂಪ್ ಗೆ ಕೆಲವೇ ಪೈಸೆಗಳಷ್ಟು ಮಾತ್ರ ವ್ಯತ್ಯಾಸವಿರಲಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಬದಲಾವಣೆಗೆ ಅನುಗುಣವಾಗಿ ತೈಲ ಬೆಲೆಯಲ್ಲಿ ಏರಿಳಿತವಾಗಲಿದೆ. ಐದು ನಗರಗಳಲ್ಲಿ ಈ ಪ್ರಯತ್ನ ಯಶಸ್ವಿಯಾದಲ್ಲಿ ಉಳಿದ ಎಲ್ಲಾ ಕಡೆಗಳಲ್ಲೂ ಇದೇ ನಿಯಮ ಜಾರಿಯಾಗಲಿದೆ. ಈ ಹಿಂದೆ ಕೂಡ ತೈಲ ಕಂಪನಿಗಳಿಗೆ ದರ ಬದಲಾವಣೆ ಮಾಡುವ ಅಧಿಕಾರವಿತ್ತು. ಆದ್ರೆ ಅವು ರಾಜಕೀಯ ಮಾರ್ಗದರ್ಶನಕ್ಕೆ ಒಳಗಾಗುತ್ತಿವೆ ಎಂಬ ಆರೋಪವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...