alex Certify
ಕನ್ನಡ ದುನಿಯಾ       Mobile App
       

Kannada Duniya

2040ರ ವೇಳೆಗೆ ಬಂದ್ ಆಗಲಿದೆ ಪೆಟ್ರೋಲ್-ಡೀಸೆಲ್ ಕಾರ್

car

ಬ್ರಿಟನ್ ನಲ್ಲಿ 2040ರ ಹೊತ್ತಿಗೆ ಪೆಟ್ರೋಲ್ ಹಾಗೂ ಡೀಸೆಲ್ ಕಾರ್ ಸಂಪೂರ್ಣವಾಗಿ ಬಂದ್ ಆಗಲಿದೆ. ವರದಿ ಪ್ರಕಾರ ವಾಯುಮಾಲಿನ್ಯ ನಿಯಂತ್ರಣಕ್ಕೆ ತರಲು ಮುಂದಾಗಿರುವ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

2040ರ ಹೊತ್ತಿಗೆ ಪೆಟ್ರೋಲ್ ಹಾಗೂ ಡೀಸೆಲ್ ಕಾರು ಬ್ರಿಟನ್ ರಸ್ತೆಗಿಳಿಯುವುದಿಲ್ಲ. ಕರೆಂಟ್ ಚಾಲಿತ ವಾಹನಗಳಿಗೆ ಮಾತ್ರ ಬ್ರಿಟನ್ ಸರ್ಕಾರ ಸಮ್ಮತಿ ನೀಡಲಿದೆ. ಫ್ರಾನ್ಸ್ ಸರ್ಕಾರ ಕೂಡ ಈ ಹಿಂದೆಯೇ ಈ ನಿರ್ಧಾರ ಕೈಗೊಂಡಿದೆ. ಮರು ಉತ್ಪಾದನೆ ಮಾಡಲಾಗದ ಇಂಧನ ಚಾಲಿತ ವಾಹನಗಳಿಗೆ ಫ್ರಾನ್ಸ್ ನಿಷೇಧ ಹೇರಲಿದೆ ಎಂದು ಫ್ರೆಂಚ್ ಪರಿಸರ ಸಚಿವ ನಿಕೋಲಸ್ ಹೇಳಿದ್ದರು.

ಈ ಯೋಜನೆಯಡಿ ಪೆಟ್ರೋಲ್, ಡೀಸೆಲ್ ವಾಹನದ ಮೇಲೆ ನಿಷೇಧ ಬೀಳಲಿದೆ. ದೊಡ್ಡ ದೊಡ್ಡ ವಾಹನ ಮಾರಾಟ ನಿಲ್ಲಲಿದೆ. ಇದು ದೊಡ್ಡ ಕಂಪನಿಗಳಿಗೆ ನಷ್ಟವಾಗಲಿದೆ. ಆದ್ರೆ ಪರಿಸರ ರಕ್ಷಣೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...