alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲೇ ‘ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ ಕಾರ್ಯಾರಂಭ

new-paytm-ad

ಭಾರತದ ಪ್ರಮುಖ ಡಿಜಿಟಲ್ ಪೇಮೆಂಟ್ ಆಪ್ ‘ಪೇಟಿಎಂ’ ಸದ್ಯದಲ್ಲೇ ಬ್ಯಾಂಕ್ ಗಳನ್ನು ಆರಂಭಿಸುತ್ತಿದೆ. ಪೇಮೆಂಟ್ಸ್ ಬ್ಯಾಂಕ್ ಗೆ ಈಗಾಗ್ಲೇ ಆರ್ ಬಿ ಐನಿಂದ ಲೈಸೆನ್ಸ್ ಸಿಕ್ಕಿದ್ದು, ಮುಂದಿನ ತಿಂಗಳು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

2016 ರ ನವೆಂಬರ್ ನಲ್ಲಿ ರಾಜಸ್ತಾನದಲ್ಲಿ ‘ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್’ ಅನ್ನು ಲಾಂಚ್ ಮಾಡಲಾಗಿತ್ತು. ಇದೀಗ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗಳು ಕೂಡ ಅಸ್ಥಿತ್ವಕ್ಕೆ ಬರಲಿವೆ. ನೋಯ್ಡಾ ಹಾಗೂ ಉತ್ತರ ಪ್ರದೇಶದಲ್ಲಿ ಮೊದಲ ಶಾಖೆಗಳು ತಲೆಯೆತ್ತುವ ಸಾಧ್ಯತೆ ಇದೆ.

2015 ರಲ್ಲೇ ಪೇಮೆಂಟ್ಸ್ ಬ್ಯಾಂಕ್ ಆರಂಭಿಸಲು ಪೇಟಿಎಂಗೆ ಅನುಮತಿ ದೊರೆತಿತ್ತು. ದೀಪಾವಳಿ ವೇಳೆಗೆ ಬ್ಯಾಂಕ್ ಆರಂಭಿಸುವ ಪ್ರಯತ್ನ ನಡೆಸಿದ್ದ ಪೇಟಿಎಂ ವಿಫಲವಾಗಿತ್ತು. ಇದೀಗ ಮತ್ತೊಮ್ಮೆ ಅನುಮತಿ ಗಿಟ್ಟಿಸಿಕೊಂಡಿರುವ ಸಂಸ್ಥೆ ಬ್ಯಾಂಕ್ ಆರಂಭಿಸಲು ಉತ್ಸುಕವಾಗಿದೆ. ‘One97 Communications’ ಸಂಸ್ಥಾಪಕ ವಿಜಯ್ ಶರ್ಮಾ ಈ ವಿಚಾರವನ್ನು ಬ್ಲಾಗ್ ಸ್ಪಾಟ್ ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ‘ಆದಿತ್ಯ ಬಿರ್ಲಾ ಐಡಿಯಾ ಪೇಮೆಂಟ್ಸ್ ಬ್ಯಾಂಕ್’ ಕೂಡ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...