alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಟಾಪ್ 10 ಬ್ರಾಂಡ್ ಗಳಲ್ಲಿ ಸ್ಥಾನ ಪಡೆದಿದೆ ಪತಂಜಲಿ

ram1

ಭಾರತದ ಅತ್ಯಂತ ಪ್ರಭಾವಶಾಲಿ ಟಾಪ್ 10 ಬ್ರಾಂಡ್ ಗಳಲ್ಲಿ ಬಾಬಾ ರಾಮ್ದೇವ್ ಅವರ ಪತಂಜಲಿ ಕೂಡ ಒಂದು. ಪತಂಜಲಿ ಆಯುರ್ವೇದ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಗೂಗಲ್ ಮೊದಲ ಸ್ಥಾನದಲ್ಲಿದ್ರೆ, ಮೈಕ್ರೋಸಾಫ್ಟ್ ಹಾಗೂ ಫೇಸ್ಬುಕ್ ಎರಡನೇ ಸ್ಥಾನ ಪಡೆದಿವೆ.

ಟಾಪ್ ಟೆನ್ ಬ್ರಾಂಡ್ ಗಳಲ್ಲಿ ಸ್ಯಾಮ್ಸಂಗ್ ಹಾಗೂ ಮುಖೇಶ್ ಅಂಬಾನಿ ಅವರ ರಿಲಯೆನ್ಸ್ ಜಿಯೋ ಕೂಡ ಸೇರ್ಪಡೆಯಾಗಿದೆ. ಕಳೆದ ಬಾರಿಯ ಸಮೀಕ್ಷೆಯಲ್ಲಿ ಜಿಯೋ ಹಾಗೂ ಪತಂಜಲಿಗೆ ಸ್ಥಾನ ಸಿಕ್ಕಿರಲಿಲ್ಲ. ಆದ್ರೆ ಅಧಿಕ ವಹಿವಾಟು ಮತ್ತು ಜನಪ್ರಿಯತೆ ಮೂಲಕ ಈ ಬಾರಿ ಗಮನ ಸೆಳೆದಿವೆ.

ಈ ಸಮೀಕ್ಷೆಯಲ್ಲಿ 21 ದೇಶಗಳ ನೂರಕ್ಕೂ ಹೆಚ್ಚು ಬ್ರಾಂಡ್ ಗಳ ಮೌಲ್ಯಾಂಕನ ಮಾಡಲಾಗಿದೆ. ಭಾರತದ 100 ಬ್ರಾಂಡ್ ಗಳ ಪಟ್ಟಿ ತಯಾರಿಸಲು 1000 ಕ್ಕೂ ಅಧಿಕ ಜನರನ್ನು ಸಂದರ್ಶಿಸಲಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಇದರಲ್ಲಿ ಸ್ಥಾನ ಪಡೆದಿದ್ದು, ಈ ಗೌರವಕ್ಕೆ ಪಾತ್ರವಾದ ದೇಶದ ಏಕೈಕ ಹಣಕಾಸು ಸಂಸ್ಥೆ ಎನಿಸಿಕೊಂಡಿದೆ.

ಎಸ್ ಬಿ ಐ 5ನೇ ಸ್ಥಾನ ಪಡೆದುಕೊಂಡಿದೆ. ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ 3 ಸ್ಥಾನ ಕುಸಿತ ಕಂಡಿದ್ದು, 10ನೇ ಸ್ಥಾನದಲ್ಲಿದೆ. ಟೆಲಿಕಾಂ ಸಂಸ್ಥೆ ಏರ್ಟೆಲ್ 8 ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...