alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಲಿಮೆಂಟ್ ಕ್ಯಾಂಟೀನ್ ನಲ್ಲಿ ನಗದು ರಹಿತ ವ್ಯಾಪಾರ

canteen

ನೋಟು ನಿಷೇಧದ 22ನೇ ದಿನ ದೆಹಲಿಯ ಪಾರ್ಲಿಮೆಂಟ್ ಕ್ಯಾಂಟೀನ್ ನಗದು ರಹಿತ ವ್ಯವಹಾರ ಶುರುಮಾಡಿದೆ. ಇ-ಪೇಮೆಂಟ್ ಗೆ ಅವಕಾಶ ಕಲ್ಪಿಸಲಾಗಿದೆ. ಕ್ಯಾಂಟೀನ್ ಹಾಗೂ ಸೇಲ್ ಕೌಂಟರ್ ಬಳಿ ಸ್ವೈಪ್ ಮಷಿನ್ ಅಳವಡಿಸಲಾಗಿದೆ. ನೋಟು ನಿಷೇಧಕ್ಕೂ ಮುನ್ನ ಇಲ್ಲಿ ಕೇವಲ ನಗದು ವ್ಯವಹಾರ ಮಾತ್ರ ನಡೆಯುತ್ತಿತ್ತು.

ಪಾರ್ಲಿಮೆಂಟ್ ಕ್ಯಾಂಟೀನ್ ನಲ್ಲಿ ಕಾರ್ಡ್ ಹಾಗೂ ಇ-ವಾಲೆಟ್ ಗೆ ಅವಕಾಶ ನೀಡಿರುವುದರಿಂದ ಸಂಸದರು ಹಾಗೂ ಸಿಬ್ಬಂದಿಗೆ ಚಿಲ್ಲರೆ ಸಮಸ್ಯೆ ಎದುರಾಗುವುದಿಲ್ಲ. ಕ್ಯಾಂಟೀನ್ ನಲ್ಲಿ ಚಿಲ್ಲರೆ ಸಮಸ್ಯೆ ಇರುವುದರಿಂದ ಅಲ್ಲಿಗೆ ಬರುವ ಜನಸಾಮಾನ್ಯ ಹಸಿದ ಹೊಟ್ಟೆಯಲ್ಲಿಯೇ ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಪ್ರಧಾನ ಮಂತ್ರಿ ಕನಸಿನಂತೆ ಸಂಸತ್ ಭವನದಲ್ಲಿ ನಗದು ರಹಿತ ವ್ಯವಹಾರ ಶುರುವಾಗಿದೆ. ಡೆಬಿಟ್ ಹಾಗೂ ಕ್ರೆಡಿಟ್ ಎರಡೂ ಕಾರ್ಡ್ ಬಳಸಲು ಅವಕಾಶ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...