alex Certify
ಕನ್ನಡ ದುನಿಯಾ       Mobile App
       

Kannada Duniya

ಷೇರು ವಹಿವಾಟಿಗೆ ಬಳಕೆಯಾಗ್ತಿದೆ ನಕಲಿ ಪಾನ್ ಕಾರ್ಡ್

554377-pan-card

ಕಳೆದ ತಿಂಗಳು ಕೇಂದ್ರ ಸರ್ಕಾರ 1.1 ಮಿಲಿಯನ್ PAN ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿತ್ತು. ಅವುಗಳಲ್ಲಿ ಬಹುತೇಕ ಕಾರ್ಡ್ ಗಳು ನಕಲಿ. ಜೊತೆಗೆ ಷೇರ್ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆಗಳನ್ನು ತೆರೆಯಲು ನಕಲಿ ಪಾನ್ ನಂಬರ್ ಬಳಸಲಾಗುತ್ತಿತ್ತು. ಅಷ್ಟೇ ಅಲ್ಲ ಷೇರು ಮಾರುಕಟ್ಟೆ ಹಾಗೂ ತೈಲ ಕಂಪನಿಗಳಲ್ಲೂ ನಕಲಿ ಪಾನ್ ಕಾರ್ಡ್ ಗಳ ಮೂಲಕ ವಹಿವಾಟು ನಡೆದಿದೆ.

ಸ್ಪೆಲ್ಲಿಂಗ್ ಸ್ವಲ್ಪ ಬದಲಾವಣೆ ಮಾಡಿದ್ರೆ ಒಬ್ಬನೇ ವ್ಯಕ್ತಿ 5 ಪಾನ್ ಕಾರ್ಡ್ ಗಳನ್ನು ಹೊಂದಬಹುದು. ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೆಲ ಸ್ಟಾಕ್ ಬ್ರೋಕರ್ ಗಳು ಇದೇ ರೀತಿ ನಕಲಿ ಪಾನ್ ಕಾರ್ಡ್ ಮಾಡಿಕೊಂಡು ಷೇರು ವಹಿವಾಟು ನಡೆಸುತ್ತಿದ್ದರು. ಹಲವು ಷೇರುದಾರರು ಕೂಡ ಇದೇ ರೀತಿ ತೆರಿಗೆ ವಂಚಿಸಿದ್ದಾರೆ.

ಒಂದೇ ವಿಳಾಸ, ಮೊಬೈಲ್ ನಂಬರ್, ಮತ್ತು ಇಮೇಲ್ ಐಡಿ ಹೊಂದಿದ್ದ ಪಾನ್ ಸಂಖ್ಯೆಗಳನ್ನೆಲ್ಲ ಪರಿಶೀಲಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ. ಸದ್ಯ ಭಾರತದಲ್ಲಿ 252 ಮಿಲಿಯನ್ ಜನರು ಪಾನ್ ಕಾರ್ಡ್ ಹೊಂದಿದ್ದಾರೆ. ಇವರಲ್ಲಿ 52 ಮಿಲಿಯನ್ ಮಂದಿ ತೆರಿಗೆ ಪಾವತಿ ಮಾಡಿದ್ದಾರೆ. ನಕಲಿ ಪಾನ್ ಕಾರ್ಡ್ ದಾರರನ್ನು ಪತ್ತೆ ಮಾಡಿ, ಅದನ್ನು ರದ್ದುಗೊಳಿಸುವ ಕಾರ್ಯ ಚುರುಕಿನಿಂದ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...