alex Certify
ಕನ್ನಡ ದುನಿಯಾ       Mobile App
       

Kannada Duniya

ನನಸಾಗಲಿದೆ ಮನೆ ಖರೀದಿ ಕನಸು

ia-17

ಕೇಂದ್ರ ಸರ್ಕಾರ ಹಳೆ ನೋಟುಗಳ ಮೇಲೆ ನಿಷೇಧ ಹೇರಿದೆ. ಇದರಿಂದಾಗಿ ಜನತೆಗೆ ಸಾಕಷ್ಟು ತೊಂದರೆಯಾಗ್ತಿದೆ. ಆದ್ರೆ ಈ ಕಷ್ಟವೆಲ್ಲ ಇನ್ನು ಕೆಲವೇ ದಿನ ಮಾತ್ರ. ಹೊಸ ವರ್ಷಾರಂಭದಲ್ಲಿ ಮಧ್ಯಮ ವರ್ಗದವರ ಕನಸು ನನಸಾಗಲಿದೆ.

ಮನೆ ಖರೀದಿ ಮಾಡುವ ಮಧ್ಯಮ ವರ್ಗದವರ ಆಸೆ ಸುಲಭವಾಗಿ ಈಡೇರಲಿದೆ. 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ನಂತ್ರ ಕಪ್ಪು ಹಣವೆಲ್ಲ ಹೊರಗೆ ಬರ್ತಾ ಇದೆ. ಕೆಲವರು ಕೂಡಿಟ್ಟ ಹಣವನ್ನು ಕಸದ ತೊಟ್ಟಿಗೆ ಹಾಕಿದ್ರೆ ಮತ್ತೆ ಕೆಲವರು ಬೆಂಕಿ ಇಟ್ಟಿದ್ದಾರೆ. ಮತ್ತೆ ಕೆಲವರು ಏನೇ ಆಗ್ಲಿ ಅಂತಾ ಬ್ಯಾಂಕ್ ಗೆ ತಮ್ಮಲ್ಲಿರುವ ಹಣ ತಂದು ಒಪ್ಪಿಸ್ತಿದ್ದಾರೆ.

ದೇಶದಲ್ಲಿರುವ ಕಪ್ಪು ಹಣವೆಲ್ಲ ಹೊರಗೆ ಬರ್ತಾ ಇದ್ದಂತೆ ರಿಯಲ್ ಎಸ್ಟೇಟ್ ಬೆಲೆ ಇಳಿಯಲಿದೆ. ರಿಯಲ್ ಎಸ್ಟೇಟ್ ಬೆಲೆಯಲ್ಲಿ ಶೇಕಡಾ 25ರಷ್ಟು ಇಳಿಕೆ ಕಾಣಲಿದೆ ಎಂದು ಮಾರುಕಟ್ಟೆ ಹಾಗೂ ಕರೆನ್ಸಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ ಬ್ಯಾಂಕ್ ಸಾಲ ಕೂಡ ಶೇಕಡಾ 1ರಿಂದ 1.5ರಷ್ಟು ಇಳಿಕೆ ಕಾಣುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಮನೆ ಖರೀದಿ ಕನಸು ಕಾಣುತ್ತಿರುವ ಮಧ್ಯಮ ವರ್ಗದ ಜನರ ಆಸೆ ಬಹುಬೇಗ ಈಡೇರಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...