alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧದ ಬಳಿಕ 30 ಲಕ್ಷ ಹೊಸ ಬ್ಯಾಂಕ್ ಖಾತೆ ಓಪನ್

bank

ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿದ ಬಳಿಕ ದೇಶಾದ್ಯಂತ 30 ಲಕ್ಷ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.

ವಿಶೇಷ ಅಂದ್ರೆ ಈ ಪೈಕಿ 11.82 ಲಕ್ಷ ಖಾತೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತೆರೆಯಲಾಗಿದೆ. ಪ್ರತಿ ದಿನ ಎಸ್ ಬಿ ಐ ನಲ್ಲಿ 50,000 ಅಕೌಂಟ್ ಗಳು ಓಪನ್ ಆಗ್ತಿವೆ. ಹಳ್ಳಿಗಾಡಿನ ಜನರಿಗೆ ಬ್ಯಾಂಕ್ ಖಾತೆ ತೆರೆಯಲು ಉದ್ಯಮ ಪ್ರತಿನಿಧಿಗಳು ನೆರವಾಗುತ್ತಿದ್ದಾರೆ ಅಂತಾ ಎಸ್ ಬಿ ಐ ಮ್ಯಾನೇಜಿಂಗ್ ಡೈರೆಕ್ಟರ್ ಮಂಜು ಅಗರ್ವಾಲ್ ತಿಳಿಸಿದ್ದಾರೆ.

ಕಾರ್ಖಾನೆಗಳು, ಚಹಾ ತೋಟ, ಟೀ ಅಂಗಡಿ, ಆಸ್ಪತ್ರೆ ಹಾಗೂ ಹೌಸಿಂಗ್ ಸೊಸೈಟಿಗಳ ಬಳಿ ತೆರಳಿ ಜನರಿಗೆ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡಲಾಗುತ್ತಿದೆ. ಖಾಸಗಿ ಬ್ಯಾಂಕ್ ಗಳಲ್ಲೂ ಖಾತೆಗಳ ಸಂಖ್ಯೆ ಶೇ.50 ರಷ್ಟು ಹೆಚ್ಚಳವಾಗಿದೆ. ಇಂಡಸ್ಟ್ರಿಗಳಲ್ಲಿ ನೌಕರರಿಗೆ ವೇತನ ಕೊಡುವುದು ಸಮಸ್ಯೆಯಾಗಿರೋದ್ರಿಂದ ಬ್ಯಾಂಕ್ ಖಾತೆ ತೆರೆಯುವುದು ಅನಿವಾರ್ಯವಾಗಿದೆ. 2016 ರ ಮಾರ್ಚ್ ವೇಳೆಗೆ ಶೇ.53 ರಷ್ಟು ಭಾರತೀಯರು ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದಾರೆಂದು ಹೇಳಲಾಗಿತ್ತು, ಈಗ ಆ ಸಂಖ್ಯೆ ಹೆಚ್ಚಳವಾಗಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...