alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಎಫೆಕ್ಟ್: ಬೆಂಗಳೂರಿನ ಇಬೇ ಸಿಬ್ಬಂದಿ ಕೆಲಸಕ್ಕೆ ಕುತ್ತು

ebay

ಬೆಂಗಳೂರು: ಅತ್ತ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗುತ್ತಲೇ, ಇತ್ತ ಬೆಂಗಳೂರಿನ ಮೇಲೆ ಪರಿಣಾಮ ಬೀರಿದೆ.

ಇಬೇ ಆನ್ ಲೈನ್ ಕಂಪನಿ ಬೆಂಗಳೂರಿನ ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಟ್ಟಿದೆ. ಅಮೆರಿಕದ 45 ನೇ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ನೀತಿಗೆ ಅನುಸಾರವಾಗಿ ಈ ಪರಿಣಾಮ ಉಂಟಾಗಿದೆ. ಅಮೆರಿಕದಲ್ಲಿ ಉದ್ಯೋಗದ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಟ್ರಂಪ್ ಹೇಳಿದ್ದರು. ಅಲ್ಲದೇ ಪ್ರತಿಷ್ಠಿತ ಕಂಪನಿಗಳು, ಸಂಸ್ಥೆಗಳು ಭಾರತದಲ್ಲಿ ಹೊರಗುತ್ತಿಗೆ ನೀಡಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದರ ಭಾಗವಾಗಿಯೇ ಅವರು ಅಧ್ಯಕ್ಷರಾಗುತ್ತಲೇ ಇಬೇ ಬೆಂಗಳೂರು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇ. 30 ರಷ್ಟು ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿದೆ.

ಜಾಗತಿಕ ವಿಸ್ತರಣೆಯ ನೆಪದಲ್ಲಿ ಇಬೇ ಸಂಸ್ಥೆ, ಬೆಂಗಳೂರು ಕೇಂದ್ರದ ಸಿಬ್ಬಂದಿಯನ್ನು ಕಡಿತಗೊಳಿಸಿದೆ. ಇದರಿಂದಾಗಿ ಜಾಗತಿಕ ಉತ್ಪನ್ನ ತಂಡದಲ್ಲಿ ಕೆಲಸ ಮಾಡುತ್ತಿದ್ದವರು ಮನೆಗೆ ಹೋಗುವಂತಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...