alex Certify
ಕನ್ನಡ ದುನಿಯಾ       Mobile App
       

Kannada Duniya

2.76 ಕೋಟಿ ರೂಪಾಯಿಗೆ ಹರಾಜಾಯ್ತು ಹಳೆಯ ಕ್ಯಾಮರಾ

nikon

ವಿಶ್ವದ ಅತ್ಯಂತ ಹಳೆಯ ನಿಕಾನ್ ಕ್ಯಾಮರಾವನ್ನು ಆಸ್ಟ್ರಿಯಾದಲ್ಲಿ ಹರಾಜು ಹಾಕಲಾಗಿದೆ. 1948ರಲ್ಲಿ ತಯಾರಾದ ಈ ಕ್ಯಾಮರಾ 2.76 ಕೋಟಿ ರೂಪಾಯಿಗೆ ಹರಾಜಾಗಿದೆ, ನಿರೀಕ್ಷೆಗಿಂತಲೂ ದುಪ್ಪಟ್ಟು ಬೆಲೆ ಗಳಿಸಿದೆ. ‘ನಿಕಾನ್ ವನ್’ ಹೆಸರಿನ ಇದು ಜಪಾನ್ ನ ಜನಪ್ರಿಯ ಕಂಪನಿ ನಿಕಾನ್ ತಯಾರಿಸಿದ ಎರಡನೇ ಕ್ಯಾಮರಾ. ಇದರಲ್ಲಿರುವ ಲೆನ್ಸ್ ಕೂಡ ಅತ್ಯಂತ ಹಳೆಯದು.

ಇದು ಡಬಲ್ ಸ್ಟ್ರಾಪ್ ಲೆದರ್ ಕೇಸ್ ಅನ್ನು ಕೂಡ ಒಳಗೊಂಡಿದೆ. ಇದರಲ್ಲಿ ನಾನ್ ಸ್ಟ್ಯಾಂಡರ್ಡ್ ಫಿಲ್ಮ್ ಸೈಜ್ ನ ಫೋಟೋಗಳನ್ನು ತೆಗೆಯಬಹುದು. ಈ ಕ್ಯಾಮರಾಕ್ಕೆ 90,000 ಯುರೋಸ್ ಬೆಲೆ ನಿಗದಿಪಡಿಸಲಾಗಿತ್ತು, ಇದು 180,000 ಯುರೋಸ್ ಗೆ ಮಾರಾಟವಾಗಬಹುದೆಂಬ ನಿರೀಕ್ಷೆ ಇತ್ತು. ನಿರೀಕ್ಷೆಗಿಂತಲೂ ದುಪ್ಪಟ್ಟು ಬೆಲೆಗೆ ಕ್ಯಾಮರಾ ಸೇಲ್ ಆಗಿದೆ, ಹರಾಜಿನಲ್ಲಿ 384,000 ಯುರೋಸ್ ಗೆ ಇದನ್ನು ಖರೀದಿ ಮಾಡಿದ್ದಾರೆ. ವೆಸ್ಟ್ ಲಿಚ್ ಫೋಟೋಗ್ರಫಿಕಾ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ 600ಕ್ಕೂ ಹೆಚ್ಚು ಪುರಾತನ ಕ್ಯಾಮರಾಗಳು, ಲೆನ್ಸ್ ಮತ್ತು ಇತರ ಬಿಡಿಭಾಗಗಳನ್ನು ಮಾರಾಟಕ್ಕೆ ಇಡಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...