alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಐವಿ, ಕ್ಯಾನ್ಸರ್, ಮಲೇರಿಯಾ ಮಾತ್ರೆಗಳ ದರ ಕಡಿತ

nppa-cuts-prices-of-malaria-hiv-cancer-drugs-by-up-to-45-pc

ನವದೆಹಲಿ: ನ್ಯಾಶನಲ್ ಫಾರ್ಮಾಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ (NPPA) 22 ಅತ್ಯಾವಶ್ಯಕ ಮಾತ್ರೆಗಳ ದರಗಳನ್ನು ಕಡಿಮೆಗೊಳಿಸಿದೆ. ಎನ್ ಪಿ ಪಿ ಎ ಯ ಈ ನಿರ್ಧಾರ ರೋಗಿಗಳಿಗೆ ದೊಡ್ಡ ವರದಾನವೇ ಆಗಿದೆ.

ಎನ್ ಪಿ ಪಿ ಎ, ಕ್ಯಾನ್ಸರ್, ಎಚ್ಐವಿ ಏಡ್ಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಹರಡುವ ಮಲೇರಿಯಾ ಮುಂತಾದ ಹಲವು ರೋಗಗಳಿಗೆ ಸಂಬಂಧಪಟ್ಟ ಮಾತ್ರೆಗಳ ದರವನ್ನು ಪ್ರತಿಶತ 45 ರಷ್ಟು ಇಳಿಸಿದೆ. ಇನ್ನೂ ಕೆಲವು ಮಾತ್ರೆಗಳ ದರವನ್ನು ಪ್ರತಿಶತ 10 ರಷ್ಟು ಇಳಿಸಿ, 13 ವಿಧದ ಮಾತ್ರೆಗಳ ರಿಟೇಲ್ ದರಗಳನ್ನು ಕೂಡ ನಿರ್ಧರಿಸಿದೆ.

ಉತ್ಪಾದಕರು ಎನ್ ಪಿ ಪಿ ಎ ನಿರ್ಧರಿಸಿದ ದರವನ್ನೇ ಪಾಲಿಸಬೇಕು. ಒಮ್ಮೆ ಕಂಪನಿ ಸೀಲಿಂಗ್ ದರ ಮತ್ತು ನಿಯಮಗಳ ಪಾಲನೆ ಮಾಡದಿದ್ದಲ್ಲಿ ಕಂಪನಿ ಪಡೆದ ಹೆಚ್ಚುವರಿ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಲಾಗುವುದು ಎಂದು ಎನ್ ಪಿ ಪಿ ಎ ಹೇಳಿದೆ. ಕಂಪನಿಗಳು ವರ್ಷದಲ್ಲಿ ಒಮ್ಮೆ ಮಾತ್ರೆಗಳ ದರವನ್ನು ಪ್ರತಿಶತ 10 ರಷ್ಟು ಏರಿಸುವ ಹಕ್ಕನ್ನು ಹೊಂದಿವೆ.

ಪ್ರಸಕ್ತ ವರ್ಷದಲ್ಲಿ ಎನ್ ಪಿ ಪಿ ಎ, 316 ಮಾತ್ರೆಗಳ ದರವನ್ನು ಕಡಿಮೆಮಾಡಿದೆ. 123 ಮಾತ್ರೆಗಳಿಗೆ ಹೆಚ್ಚುವರಿ ದರ ನಿಕ್ಕಿಗೊಳಿಸಿದೆ. ಈ ಹಿಂದೆ ಕೂಡ ಎನ್ ಪಿ ಪಿ ಎ, 51 ಮಾತ್ರೆಗಳ ರಿಟೇಲ್ ದರವನ್ನು ನಿರ್ಧರಿಸಿತ್ತು. ಕಳೆದ ಜುಲೈನಲ್ಲಿ ಇಂತಹ ನಿಯಮಗಳನ್ನು ಮೀರಿದ 118 ಕಂಪನಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...