alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಲ್ ಪಾವತಿಯಿಂದ ಸಿನಿಮಾ ಟಿಕೆಟ್ ವರೆಗೆ ಎಲ್ಲ ಕೆಲಸ ಮಾಡುತ್ತೆ ಎಟಿಎಂ..!

atm-machines_indiatvpaisa

ಈಗ ಪ್ರತಿಯೊಂದು ಕೆಲಸವನ್ನೂ ನೀವೂ ಎಟಿಎಂ ಮೂಲಕ ಮಾಡಬಹುದು. ಸಿನಿಮಾ ಟಿಕೆಟ್ ಖರೀದಿ ಮಾಡುವುದರಿಂದ ಹಿಡಿದು ಬಿಲ್ ಪಾವತಿ ಮಾಡುವವರೆಗೆ ಎಲ್ಲ ಕೆಲಸವನ್ನೂ ಎಟಿಎಂನಲ್ಲಿ ಮಾಡಬಹುದಾಗಿದೆ. ಇಷ್ಟೇ ಅಲ್ಲ ವಿಮಾನ ಟಿಕೆಟ್ ಕೂಡ ಎಟಿಎಂನಲ್ಲಿಯೇ ಬುಕ್ ಮಾಡ್ಬಹುದು.

ನಿಮಗೆ ಜೋಕ್ ಅನ್ನಿಸಬಹುದು. ಆದ್ರೆ ಇದು ಸತ್ಯ. ಮುಂಬೈನ ಟರ್ನರ್ ರಸ್ತೆಯಲ್ಲಿರುವ ಸಿಎಂಎಸ್  ನ ಎಟಿಎಂನಲ್ಲಿ ನೀವು ಎಲ್ಲ ಕೆಲಸವನ್ನೂ ಮಾಡಬಹುದಾಗಿದೆ. ದಾಖಲಾಗಿರುವ ಮೊಬೈಲ್ ನಂಬರ್ ಗೆ ಓಟಿಪಿ ರವಾನೆ ಮಾಡಿ ಇಲ್ಲವೆ ಆಧಾರ್ ಕಾರ್ಡ್ ಆಧಾರದ ಮೇಲೆ ಇದು ಕೆಲಸ ಮಾಡಲಿದೆ.

ಎಟಿಎಂ ಮೂಲಕ ಗ್ಯಾಸ್ ಬಿಲ್ ಪಾವತಿಸಬಹುದಾಗಿದೆ. ಬಂಗಾರದ ನಾಣ್ಯವನ್ನು ಕೂಡ ನೀವು ಎಟಿಎಂ ಮೂಲಕ ಖರೀದಿ ಮಾಡಬಹುದಾಗಿದೆ. ಒಂದೇ ಜಾಗದಲ್ಲಿ ಎಲ್ಲ ರೀತಿಯ ಕೆಲಸ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಮಶಿನ್ ಸಿದ್ಧಪಡಿಸಲಾಗಿದೆ. ಎಫ್ ಎಸ್ ಎಸ್,ಸಿಎಂಎಸ್,ಎಜಿಎಸ್ ಸೇರಿದಂತೆ ಎಟಿಎಂ ಮ್ಯಾನೇಜರ್ ಇಂತ ಎಟಿಎಂಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ.

ಹಣ ಡ್ರಾ ಮಾಡುವ ಜೊತೆಗೆ ವಿದೇಶ ಹಣ ವಿನಿಮಯ,ಸಾಲ ಪಾವತಿ,ಚೆಕ್ ಎನ್ಕ್ಯಾಶ್ ಮೆಂಟ್,ಮೊಬೈಲ್ ಬಿಲ್ ರಿಚಾರ್ಜ್,ಡಿಟಿಎಚ್ ರಿಚಾರ್ಜ್ ಕೆಲಸವನ್ನೂ ಎಟಿಎಂ ಮಾಡುತ್ತೆ.

ಮುಂಬೈನ್ ಎಜಿಎಸ್ ಇನೋವೇಶನ್ ಸೆಂಟರ್ ಚಿನ್ನದ ನಾಣ್ಯಗಳೂ ದೊರೆಯುವಂತಹ ಎಟಿಎಂ ವಿನ್ಯಾಸಗೊಳಿಸಿದೆ. ಇದರಲ್ಲಿ ಪರಿಶುದ್ಧ ಚಿನ್ನದ ಪ್ರಮಾಣ ಪತ್ರ ಕೂಡ ಸಿಗಲಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ಕೂಡ ತೆರೆಯಬಹುದಾಗಿದೆ.

ತಕ್ಷಣ ಎಟಿಎಂ ನಿಮಗೆ ಡೆಬಿಟ್ ಕಾರ್ಡ್ ನೀಡಲಿದೆ. ಈ ಎಟಿಎಂ ಮೂಲಕ ವಿಡಿಯೋ ಕಾನ್ಫರೆನ್ಸ್ ಕೂಡ ನೀವು ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...