alex Certify
ಕನ್ನಡ ದುನಿಯಾ       Mobile App
       

Kannada Duniya

ಜ.1 ರಿಂದ ದೈನಂದಿನ ಜೀವನದಲ್ಲಾಗಲಿದೆ ದೊಡ್ಡ ಬದಲಾವಣೆ

ಜನವರಿ 1,2018 ಹೊಸ ವರ್ಷಾರಂಭಕ್ಕೆ ದಿನಗಣನೆ ಶುರುವಾಗಿದೆ. ಸಂಭ್ರಮಾಚರಣೆಗೆ ಭರ್ಜರಿ ತಯಾರಿ ನಡೆದಿದೆ. ಈ ಮಧ್ಯೆ ಜನವರಿ 1ರಿಂದ ಕೆಲವೊಂದು ಮಹತ್ವದ ಬದಲಾವಣೆಗಳಾಗಲಿವೆ. ದೈನಂದಿನ ಜೀವನಕ್ಕೆ ಸಂಬಂಧಿಸಿದ ಈ ಬದಲಾವಣೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ.

ಮೊದಲನೆಯದಾಗಿ ಜನವರಿ 1 ರಿಂದ ಎಸ್ ಬಿ ಐ ಜೊತೆ ವಿಲೀನವಾದ ಬ್ಯಾಂಕ್ ಗಳ ಹಳೆ ಚೆಕ್ ಬುಕ್ ಮಾನ್ಯತೆ ಪಡೆಯುವುದಿಲ್ಲ. ಗ್ರಾಹಕರು ಚೆಕ್ ಬುಕ್ ಬದಲಾವಣೆ ಮಾಡಿಕೊಳ್ಳಬೇಕು. ಹಾಗೆ ಐ ಎಫ್ ಎಸ್ ಸಿ ಕೋಡ್ ಕೂಡ ಬದಲಾಗಲಿದೆ. ನೆಟ್ ಬ್ಯಾಂಕಿಂಗ್ ಗೆ ಮೊದಲು ಬದಲಾದ ಐ ಎಫ್ ಎಸ್ ಸಿ ಕೋಡ್ ಬಗ್ಗೆ ತಿಳಿದುಕೊಳ್ಳಬೇಕು.

ಕಾರುಗಳು ಹೊಸ ವರ್ಷದಿಂದ ದುಬಾರಿಯಾಗಲಿವೆ. ಈಗಾಗಲೇ ಕಾರು ಕಂಪನಿಗಳು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿವೆ. ಮಾರುತಿ ಸುಜುಕಿ, ಹೋಂಡಾ ಕಾರ್ಸ್, ಟಾಟಾ ಮೋಟರ್ಸ್, ಮಹೀಂದಾ ಎಂಡ್ ಮಹೀಂದ್ರಾ, ಸ್ಕೋಡಾ, ಟೊಯೋಟಾ, ನಿಸ್ಸಾನ್, ಫೋರ್ಡ್ ಸೇರಿದಂತೆ ಅನೇಕ ಕಂಪನಿಗಳು ತಮ್ಮ ಕಾರುಗಳ ಬೆಲೆ ಏರಿಕೆ ಮಾಡಿವೆ.

ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಕಂಪನಿ ಹೀರೋ ಮೋಟೋಕಾರ್ಪ್ ಕೂಡ ತನ್ನ ಮೋಟರ್ ಸೈಕಲ್ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ಕಂಪನಿ ಮಾಹಿತಿ ಪ್ರಕಾರ ಜನವರಿ 1 ರಿಂದ ಎಲ್ಲ ಮೋಟರ್ ಬೈಕ್ ಶೋ ರೂಮಿನಲ್ಲಿ ಬೆಲೆ ಏರಿಕೆಯಾಗಲಿದೆ.

ಆನ್ಲೈನ್ ಶಾಪಿಂಗ್ ಸುರಕ್ಷಿತವಾಗಲಿದೆ. ಆನ್ಲೈನ್ ಕಂಪನಿಗಳು ವಸ್ತುಗಳ ಪ್ಯಾಕೆಟ್ ಮೇಲೆ ಉತ್ಪನ್ನದ ಬೆಲೆಯನ್ನು ತಿಳಿಸದೇ ಹೋದಲ್ಲಿ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇರುತ್ತದೆ.

ಕೃಷಿಕರ ಖಾತೆಗೆ ನೇರವಾಗಿ ಸಬ್ಸಿಡಿ ಹೋಗಲಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳು ತಯಾರಿ ಪೂರ್ಣಗೊಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...