alex Certify
ಕನ್ನಡ ದುನಿಯಾ       Mobile App
       

Kannada Duniya

ನೀರು ಬಿದ್ರೆ ಬಣ್ಣ ಮಾಸುತ್ತಿದೆಯಾ ಹೊಸ 500 ರೂ. ನೋಟು..?

now-kerala-man-claims-fading-of-printing-in-rs-500-noteಕಾಳಧನಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ, ನವೆಂಬರ್ 8 ರ ಮಧ್ಯ ರಾತ್ರಿಯಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿ ಹೊಸ 2000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಿದೆ.

ಬಿಡುಗಡೆಗೊಂಡಿರುವ ಹೊಸ ನೋಟುಗಳಲ್ಲಿ ಕೆಲ ನ್ಯೂನ್ಯತೆಗಳಿರುವುದನ್ನು ರಿಸರ್ವ್ ಬ್ಯಾಂಕ್ ಕೂಡಾ ಒಪ್ಪಿಕೊಂಡಿರುವ ಮಧ್ಯೆ 500 ರೂ. ನೋಟಿನ ಮೇಲೆ ನೀರು ಬಿದ್ದರೆ ಬಣ್ಣ ಮಾಸುತ್ತದೆಯಲ್ಲದೇ ಅದರಲ್ಲಿ ಅಳವಡಿಸಿರುವ ಸೆಕ್ಯುರಿಟಿ ಥ್ರೆಡ್ ಕೂಡಾ ಕಿತ್ತು ಬಂದಿದೆ ಎಂದು ಸಾರ್ವಜನಿಕರೊಬ್ಬರು ದೂರಿದ್ದಾರೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಗಫೂರ್ ಎಂಬವರು ಈ ಕುರಿತು ಗಮನ ಸೆಳೆದಿದ್ದು, ಅವರ ಕಿಸೆಯಲ್ಲಿದ್ದ 500 ರೂ. ನೋಟುಗಳ ಮೇಲೆ ನೀರು ಬಿದ್ದಾಗ ಬಣ್ಣ ಮಾಸಿದೆ ಎಂದಿದ್ದಾರಲ್ಲದೇ ಸೆಕ್ಯುರಿಟಿ ಥ್ರೆಡ್ ಕೂಡಾ ಕಿತ್ತುಕೊಂಡು ಬಂದಿದೆ ಎಂದು ಹೇಳಿದ್ದಾರೆ. ಈ ನೋಟುಗಳನ್ನು ಬದಲಾಯಿಸಿಕೊಡುವಂತೆ ಅವರು ಸನಿಹದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಹೋದಾಗ ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ರಿಸರ್ವ್ ಬ್ಯಾಂಕ್ ನಲ್ಲಿಯೇ ಬದಲಾಯಿಸಿಕೊಳ್ಳುವಂತೆ ಸೂಚಿಸಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...