alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮಲ್ಲಿರುವ ನೋಟು ಬದಲಾಯಿಸಿಕೊಳ್ಳಿ

500-rs

ಬ್ಲಾಕ್ ಮನಿ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಪ್ರಧಾನಿ ಮೋದಿ 500 ರೂ, 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ.

ನಿಮ್ಮ ಬಳಿ ಇರುವ 500 ರೂ. ಹಾಗೂ 1000 ರೂ. ನೋಟುಗಳು ಚಲಾವಣೆಯಾಗುವುದಿಲ್ಲ. 100 ರೂ. 50 ರೂ., 20 ರೂ., 10 ರೂ., 5 ರೂ. ನೋಟುಗಳು ಹಾಗೂ ನಾಣ್ಯಗಳು ಚಲಾವಣೆಯಲ್ಲಿರುತ್ತವೆ. ನವೆಂಬರ್ 10 ರಿಂದ ಡಿಸೆಂಬರ್ 30 ರವರೆಗೆ ನಿಮ್ಮಲ್ಲಿರುವ ನೋಟುಗಳನ್ನು ಬ್ಯಾಂಕ್ ಇಲ್ಲವೇ ಅಂಚೆ ಕಚೇರಿಗಳಲ್ಲಿ ಸಲ್ಲಿಸಿ ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಬ್ಯಾಂಕ್, ಪೋಸ್ಟ್ ಆಫೀಸ್ ಗಳಲ್ಲಿ ನಿಮ್ಮ ಖಾತೆಗೆ ನಿಮ್ಮಲ್ಲಿರುವ ಹಣವನ್ನು ಜಮೆ ಮಾಡಬಹುದಾಗಿದೆ. ಇನ್ನುಮುಂದೆ 1000 ರೂ. ನೋಟುಗಳು ಚಲಾವಣೆಯಲ್ಲಿರುವುದಿಲ್ಲ. ಹೊಸ ಮಾದರಿಯ 500 ರೂ. ಹಾಗೂ 2000 ರೂ ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿವೆ.

ನವೆಂಬರ್ 9, 10 ರಂದು ಬ್ಯಾಂಕ್ ವ್ಯವಹಾರ ಇರುವುದಿಲ್ಲ. ನವೆಂಬರ್ 11 ರಿಂದ ಎ.ಟಿ.ಎಂ.ಗಳಲ್ಲಿ ನೀವು 2000 ರೂಪಾಯಿವರೆಗೆ ಡ್ರಾ ಮಾಡಬಹುದಾಗಿದ್ದು, ಇದನ್ನು ಮುಂದಿನ ಹಂತಗಳಲ್ಲಿ ಹೆಚ್ಚಿಸಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...