alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ಶಾಪಿಂಗ್ ನಲ್ಲಿ ಮೋಸ ಹೋದವರಿಗೆ ಇಲ್ಲಿ ಸಿಗುತ್ತೆ ನ್ಯಾಯ!

online-shopping

ಬೆಂಗಳೂರಿನ ಟೆಕ್ಕಿ ಪಂಕಜ್ ಉಪಾಧ್ಯಾಯ ಎಂಬಾಕೆ ಆನ್ ಲೈನ್ ನಲ್ಲಿ ಸ್ಮಾರ್ಟ್ ಫೋನ್ ಆರ್ಡರ್ ಮಾಡಿದ್ರು. ಆದ್ರೆ ಮೊಬೈಲ್ ಬದಲು ಬಾಕ್ಸಿನಲ್ಲಿ ಬಂದಿದ್ದು ಕಲ್ಲು. ಕೂಡಲೇ ಗ್ರಾಹಕ ನ್ಯಾಯಾಲಯದಲ್ಲಿ ದೂರು ಕೊಟ್ಟಿದ್ರೂ ಇದುವರೆಗೂ ಪಂಕಜ್ ಗೆ ಪರಿಹಾರ ಸಿಕ್ಕಿಲ್ಲ.

ಪಂಕಜ್ ಅವರಂತೆ ಮೋಸ ಹೋದ ಎಷ್ಟೋ ಗ್ರಾಹಕರು ನ್ಯಾಯಕ್ಕಾಗಿ ಕಾಯುತ್ತಲೇ ಇದ್ದಾರೆ. ಇದೀಗ ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ‘ಆನ್ ಲೈನ್ ಕನ್ಸೂಮರ್ ಮೀಡಿಯೇಶನ್ ಕೇಂದ್ರ’ವೊಂದನ್ನು ಸ್ಥಾಪಿಸಲಾಗಿದೆ. ಆನ್ ಲೈನ್ ಶಾಪಿಂಗ್ ನಲ್ಲಿ ಮೋಸ ಹೋದವರಿಗೆ ನ್ಯಾಯಕೊಡಿಸಲೆಂದೇ ಹುಟ್ಟಿಕೊಂಡ ಕೇಂದ್ರವಿದು.

ಬಹುತೇಕ ಜನರಿಗೆ ಗ್ರಾಹಕ ರಕ್ಷಣಾ ಕಾಯ್ದೆ ಬಗ್ಗೆ ಅರಿವೇ ಇಲ್ಲ. ಮೋಸ ಹೋದ ಮೇಲೆ ಮುಂದೇನು ಅನ್ನೋದು ತಿಳಿಯದೇ ಎಷ್ಟೋ ಜನರು ಸುಮ್ಮನಾಗ್ತಾರೆ. ಅವರು ಯಾವಾಗ ಬೇಕಾದ್ರೂ ಈ ಕೇಂದ್ರಕ್ಕೆ ದೂರು ನೀಡಬಹುದು. ಆನ್ ಲೈನ್ ಮೂಲಕವೇ ಇಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ಕೂಡ ನಡೆಯುತ್ತದೆ. ಮೋಸ ಹೋದ ಗ್ರಾಹಕರಿಗೆ ಇಲ್ಲಿ ಬೇಗ ನ್ಯಾಯ ಸಿಗುತ್ತದೆ. ಜೊತೆಗೆ ಕೋರ್ಟ್ ಗೆ ಅಲೆದಾಡುತ್ತ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಅಗತ್ಯವಿಲ್ಲ. ಈ ಒಪ್ಪಂದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ ಈಗಾಗ್ಲೇ ಸೂಚಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...