alex Certify
ಕನ್ನಡ ದುನಿಯಾ       Mobile App
       

Kannada Duniya

ನೋಕಿಯಾ 6, ನೋಕಿಯಾ 8 ಮೊಬೈಲ್ ಗೆ ಇಲ್ಲಿ ಸಿಗ್ತಿದೆ ಡಿಸ್ಕೌಂಟ್

ಅಮೆಜಾನ್ ಇಂಡಿಯಾದಲ್ಲಿ ನೋಕಿಯಾ ವೀಕ್ ಆಯೋಜನೆ ಮಾಡ್ತಿದೆ. ಈ ವೇಳೆ ರಿಯಾಯಿತಿ ಜೊತೆಗೆ ಕ್ಯಾಶ್ಬ್ಯಾಕ್, ವಿನಿಮಯ ಆಫರನ್ನು ಕಂಪನಿ ನೀಡ್ತಿದೆ. ಐಸಿಐಸಿಐ ಕಾರ್ಡ್ ಬಳಕೆದಾರರಿಗೆ 1500 ರೂಪಾಯಿ ತ್ವರಿತ ರಿಯಾಯಿತಿ ಕೂಡ ಸಿಗಲಿದೆ.

ಜನವರಿ 8ರ ಮಧ್ಯರಾತ್ರಿ 12 ಗಂಟೆಯಿಂದ ನೋಕಿಯಾ ವೀಕ್ ಶುರುವಾಗಲಿದ್ದು ಜನವರಿ 12 ರಾತ್ರಿ 11.59ರವರೆಗೆ ನಡೆಯಲಿದೆ. ಕಂಪನಿ ನೋಕಿಯಾ 6 ಮೊಬೈಲನ್ನು ಹಿಂದಿನ ವರ್ಷ14,999 ರೂಪಾಯಿಗೆ ಬಿಡುಗಡೆ ಮಾಡಿತ್ತು. ನೋಕಿಯಾ 8 ಸ್ಮಾರ್ಟ್ಫೋನ್ 36,999 ರೂಪಾಯಿಗೆ ಬಿಡುಗಡೆಯಾಗಿತ್ತು. ಈಗ ಅಮೆಜಾನ್ ಈ ಎರಡೂ ಮೊಬೈಲ್ ಮೇಲೆ 1500 ರೂಪಾಯಿ ಫ್ಲಾಶ್ ಡಿಸ್ಕೌಂಟ್ ನೀಡ್ತಿದೆ. ಅಂದ್ರೆ 14,999 ರೂಪಾಯಿ ಮೊಬೈಲ್ 13,499 ರೂಪಾಯಿ ಹಾಗೂ 36,999 ರೂಪಾಯಿ ನೋಕಿಯಾ 8 ಮೊಬೈಲ್ 35,499 ರೂಪಾಯಿಗೆ ಸಿಗಲಿದೆ.

ನೋಕಿಯಾ 6 ಮತ್ತು ನೋಕಿಯಾ 8 ಮೇಲೆ ಮಾತ್ರ ಈ ಆಫರ್ ಸಿಗಲಿದೆ. ಐದು ದಿನಗಳೊಳಗೆ ಗ್ರಾಹಕರು ಇದ್ರ ಲಾಭ ಪಡೆಯಬಹುದಾಗಿದೆ. ಈ ಎರಡೂ ಮೊಬೈಲ್ ಕೇವಲ ಐಸಿಐಸಿಐ ಕಾರ್ಡ್ ಬಳಕೆದಾರರಿಗೆ ಮಾತ್ರ ರಿಯಾಯಿತಿ ದರದಲ್ಲಿ ಸಿಗಲಿದೆ. ಇದ್ರ ಜೊತೆಗೆ ಕ್ಯಾಶ್ಬ್ಯಾಕ್ ಹಾಗೂ ವಿನಿಮಯ ಆಫರ್ ಕೂಡ ಅಮೆಜಾನ್ ನೀಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...