alex Certify
ಕನ್ನಡ ದುನಿಯಾ       Mobile App
       

Kannada Duniya

17 ವರ್ಷಗಳ ಕಾಯುವಿಕೆ ಮುಕ್ತಾಯ–ನೋಕಿಯಾ 3310 ಶಿಪ್ಪಿಂಗ್ ಶುರು

nokia_bqncadb-1

ನೋಕಿಯಾ ಸ್ಮಾರ್ಟ್ಫೋನ್ 3310 ಪ್ರಿಯರಿಗೊಂದು ಖುಷಿ ಸುದ್ದಿ. ನೋಕಿಯಾ ಔಪಚಾರಿಕವಾಗಿ 3310 ಫೋನ್ ಶಿಪ್ಪಿಂಗ್ ಶುರುಮಾಡಿದೆ. ಈ ವಿಷಯವನ್ನು ನೋಕಿಯಾ ತನ್ನ ಅಧಿಕೃತ ಟ್ವೀಟರ್ ನಲ್ಲಿ ದೃಢಪಡಿಸಿದೆ.

ನಿಮ್ಮ 17 ವರ್ಷಗಳ ಕಾಯುವಿಕೆ ಮುಕ್ತಾಯವಾಗಿದೆ. ನೋಕಿಯಾ 3310 ಶಿಪ್ಪಿಂಗ್ ಶುರುವಾಗಿದೆ ಎಂದು ನೋಕಿಯಾ ಟ್ವಿಟ್ ಮಾಡಿದೆ. ಇದ್ರ ಜೊತೆಗೆ ಪ್ರಚಾರದ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದೆ. ಇನ್ನೇನು ನಿಮ್ಮ 3310 ನಿಮ್ಮ ಬಳಿ ತಲುಪಲಿದೆ ಎಂದು ನೋಕಿಯಾ ಹೇಳಿದೆ.

ಮಾಹಿತಿಗಳ ಪ್ರಕಾರ ಹೆಚ್ ಎಂ ಡಿ ಗ್ಲೋಬಲ್, ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಹಾಗೂ ನೋಕಿಯಾ 3310 ಫೋನ್ ಬಿಡುಗಡೆ ಬಗ್ಗೆ ಮೇ 8 ರಂದು ಅಧಿಕೃತ ಘೋಷಣೆ ಮಾಡಲಿದೆ. ಮೇ 8 ರಂದು ಹೆಚ್ ಎಂ ಡಿ ಗ್ಲೋಬಲ್ ಭಾರತದಲ್ಲಿ ಒಂದು ಕಾರ್ಯಕ್ರಮ ನಡೆಸಲಿದೆ. ಈ ಕಾರ್ಯಕ್ರಮದಲ್ಲಿ ನೋಕಿಯಾ 3, ನೋಕಿಯಾ 5, ನೋಕಿಯಾ6 ಮತ್ತು ನೋಕಿಯಾ 3310 ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...