alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಮಾರುಕಟ್ಟೆಗೆ ಬಂತು ನೋಕಿಯಾ 3310 ಮೊಬೈಲ್

nokia_2_1024_1495095454_749x421

ನೋಕಿಯಾ ಪ್ರಿಯರ ಕಾಯುವಿಕೆ ಕೊನೆಯಾಗಿದೆ. ಸುಮಾರು ಒಂದು ದಶಕದ ನಂತ್ರ ನೋಕಿಯಾ ಫೋನ್ ಭಾರತ ಮಾರುಕಟ್ಟೆ ಪ್ರವೇಶ ಮಾಡಿದೆ. ನೋಕಿಯಾ 3310 ಫೋನ್ ಮಾರಾಟ ಇಂದಿನಿಂದ ಭಾರತದಲ್ಲಿ ಶುರುವಾಗಿದೆ. ನೋಕಿಯಾ 3310 ಹ್ಯಾಂಡ್ ಸೆಟ್ ಗಾಗಿ ಕಾದು ಕುಳಿತಿದ್ದ ಗ್ರಾಹಕರು ಹೊಸ ವಿನ್ಯಾಸದ ಮೊಬೈಲ್ ಕೈನಲ್ಲಿ ಹಿಡಿದು ಆನಂದಿಸುವ ಕಾಲ ಕೂಡಿ ಬಂದಿದೆ.

ನೋಕಿಯಾ 3310 ಫೋನ್ ಗ್ರಾಹಕರಿಗೆ ಆಪ್ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಾಗಲಿದೆ. ಕೆಂಪು, ಹಳದಿ, ಕಡು ನೀಲಿ ಹಾಗೂ ಬೂದು ಸೇರಿದಂತೆ ನಾಲ್ಕು ಬಣ್ಣದಲ್ಲಿ ಮೊಬೈಲ್ ಗ್ರಾಹಕರಿಗೆ ಸಿಗ್ತಾ ಇದೆ. 3310 ರೂಪಾಯಿಯ ಈ ಮೊಬೈಲ್ ಆನ್ಲೈನ್ ನಲ್ಲಿ ಮಾರಾಟ ಮಾಡದಿರಲು ಕಂಪನಿ ನಿರ್ಧರಿಸಿದೆ.

ಒಂದು ಬಾರಿ ಚಾರ್ಜ್ ಮಾಡಿ ಒಂದಿಡೀ ದಿನ ಫೋನ್ ನಲ್ಲಿ ಮಾತನಾಡಿ, ಎಫ್ ಎಂ ಅಥವಾ ಎಂಪಿ3ನಲ್ಲಿ ಹಾಡು ಕೇಳಿ ಇಲ್ಲ ಫೋಟೋ ಹೊಡೆಯಿರಿ ಅಥವಾ ಸಂದೇಶ ಕಳುಹಿಸಿ. ನಿಮ್ಮ ಮೊಬೈಲ್ ಫೋನ್ ಚಾರ್ಜ್ ಕಡಿಮೆಯಾಗುವುದಿಲ್ಲ ಎಂದು ಹೆಚ್ ಎಂ ಟಿ ಗ್ಲೋಬಲ್ ಇಂಡಿಯಾದ ಉಪಾಧ್ಯಕ್ಷ ಅಜಯ್ ಮೆಹ್ತಾ ಹೇಳಿದ್ದಾರೆ. ಹೊಸ ವಿನ್ಯಾಸ ನಿಮಗೆ ಇಷ್ಟವಾಗಲಿದೆ ಎಂದವರು ಹೇಳಿದ್ದಾರೆ.

2.4 ಇಂಚಿನ ಕಲರ್ ಡಿಸ್ ಪ್ಲೇ ಹೊಂದಿದ್ದು, ಕರ್ವ್ಡ್ ಗ್ಲಾಸ್ ಅಳವಡಿಸಲಾಗಿದೆ. ಅತ್ಯಂತ ಚಿಕ್ಕದಾಗಿ, ಹಗುರವಾಗಿರುವ ಮೊಬೈಲ್ ಬಳಕೆಗೆ ಅತ್ಯಂತ ಅನುಕೂಲಕರವಾಗಿದೆ.  ಡ್ಯೂಯಲ್ ಸಿಮ್ ಕಾರ್ಡ್, 2 ಎಂಪಿ ಕ್ಯಾಮರಾ, 32 ಜಿಬಿ ಮೈಕ್ರೋ ಎಸ್ ಡಿ ಕಾರ್ಡ್ ಸಪೋರ್ಟ್ ಹೀಗೆ ಹಲವು ಫೀಚರ್ ಗಳನ್ನು ಹೊಂದಿದೆ.. ಹೆಚ್ ಎಂ ಟಿ ಗ್ಲೋಬಲ್ ಇತ್ತೀಚೆಗಷ್ಟೇ ನೋಕಿಯಾ 3310 ಹ್ಯಾಂಡ್ ಸೆಟ್ ಬಿಡುಗಡೆ ಮಾಡಿತ್ತು. ಮುಂದಿನ ದಿನಗಳಲ್ಲಿ ಆ್ಯಂಡ್ರಾಯ್ಡ್ ಫೋನ್ ಗಳನ್ನು ಕೂಡ ಬಿಡುಗಡೆ ಮಾಡಲು ನೋಕಿಯಾ ಕಂಪನಿ ಯೋಜನೆ ಹಾಕಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...