alex Certify
ಕನ್ನಡ ದುನಿಯಾ       Mobile App
       

Kannada Duniya

ನೋಕಿಯಾ 3310 ಹೊಸ ರೂಪಾಂತರದಲ್ಲಿ ಸಿಗಲಿದೆ ಫೇಸ್ಬುಕ್–ವಾಟ್ಸಾಪ್

ಎಚ್ಎಂಡಿ ಗ್ಲೋಬಲ್ ನೋಕಿಯಾ 3310 ಫೀಚರ್ ಫೋನ್ ನ ಹೊಸ ರೂಪಾಂತರ ಬಿಡುಗಡೆ ಮಾಡಿ ಸುದ್ದಿ ಮಾಡಿತ್ತು. ಇದಾದ ನಂತ್ರ ಕಂಪನಿ 3ಜಿ ಫೋನ್ ಕೂಡ ಬಿಡುಗಡೆ ಮಾಡಿದೆ. ಆದ್ರೆ ಇದು ಕೆಲವೇ ಮಾರುಕಟ್ಟೆಗಳಲ್ಲಿ ಮಾತ್ರ ಸಿಗ್ತಿದೆ. ಈ ಮಧ್ಯೆ ನೋಕಿಯಾ 3310 4ಜಿ ಫೀಚರ್ ಫೋನ್ ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಈ ಫೀಚರ್ ಫೋನನ್ನು ಕಂಪನಿ ನೋಕಿಯಾ 9 ಜೊತೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಚೀನಾದ ವೆಬ್ಸೈಟ್ TENAA, ನೋಕಿಯಾ 6 ಫೋನ್ ನ 2018ರ ರೂಪಾಂತರ ಹೇಗಿರುತ್ತೆ ಎಂಬುದನ್ನು ಫೋಟೋ ಮೂಲಕ ತಿಳಿಸಿತ್ತು.ಈಗ ಇದೇ ವೆಬ್ಸೈಟ್ ನಲ್ಲಿ ನೋಕಿಯಾ 3310 4ಜಿ ರೂಪಾಂತರವನ್ನು ತೋರಿಸಲಾಗಿದೆ. ವೆಬ್ಸೈಟ್ ನಲ್ಲಿ ಈ ಫೋನ್ನ ಫೋಟೋ ಕೂಡ ಇದೆ.

ವರದಿ ಪ್ರಕಾರ ನೋಕಿಯಾ 3310ದಲ್ಲಿ YunOS ನೀಡಲಾಗಿದೆಯಂತೆ. ಸದ್ಯ ನೋಕಿಯಾ 3310 ಫೋನ್ 2ಜಿ ಹಾಗೂ 3ಜಿಯಲ್ಲಿ ಮಾತ್ರ ಲಭ್ಯವಿದೆ. ಒಂದು ವೇಳೆ ಹೊಸ ಫೋನ್ ಗೆ YunOS ಅಳವಡಿಸಿದಲ್ಲಿ ಅನೇಕ ಅಪ್ಲಿಕೇಷನ್ ಓಪನ್ ಆಗಲಿದೆ. ಇದ್ರಲ್ಲಿ ಫೇಸ್ಬುಕ್ ಹಾಗೂ ವಾಟ್ಸಾಪ್ ಆ್ಯಪ್ ಕೂಡ ವರ್ಕ್ ಆಗಲಿದ್ದು, ಕೈಗೆಟಕುವ ದರದಲ್ಲಿ ಸಿಗಲಿರುವ ಈ ಮೊಬೈಲ್ ಸಾಕಷ್ಟು ಪ್ರಸಿದ್ಧಿ ಪಡೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...