alex Certify
ಕನ್ನಡ ದುನಿಯಾ       Mobile App
       

Kannada Duniya

2 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡುವ ನೋಕಿಯಾ ಫೋನ್ ಬಿಡುಗಡೆ

ಹೆಚ್ ಎಂ ಡಿ ಗ್ಲೋಬಲ್ ಕಂಪನಿ ನೋಕಿಯಾ ಬ್ರ್ಯಾಂಡ್ ನ ತನ್ನ ಹೊಸ ಮೊಬೈಲನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನೋಕಿಯಾ 2 ಭಾರತದಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಗೆ 4100 mAh ಬ್ಯಾಟರಿ ನೀಡಲಾಗಿದೆ. ಈ ಫೋನ್ ಎರಡು ದಿನಗಳ ಕಾಲ ಬ್ಯಾಟರಿ ಬ್ಯಾಕಪ್ ನೀಡಲಿದೆ ಎಂದು ಕಂಪನಿ ಹೇಳಿದೆ.

ಗ್ಲೋಬಲ್ ಮಾರುಕಟ್ಟೆಯಲ್ಲಿ ಫೋನ್ 99 ಯುರೋಗೆ ಸಿಗಲಿದೆ. ಭಾರತದಲ್ಲಿ ಇದ್ರ ಬೆಲೆ ಸುಮಾರು 7500 ರೂಪಾಯಿ ಎಂದು ಅಂದಾಜಿಸಲಾಗಿದೆ. ಇದ್ರಲ್ಲಿ 5 ಹೆಚ್ಡಿ ಎಲ್ ಟಿ ಪಿ ಎಸ್ ಡಿಸ್ಪ್ಲೇ ನೀಡಲಾಗಿದೆ. ಸ್ಕ್ರೀನ್ ಸುರಕ್ಷತೆಗಾಗಿ ಕಂಪನಿ ಗೊರಿಲ್ಲಾ 3 ಗ್ಲಾಸ್ ನೀಡಿದೆ. 1ಜಿಬಿ ರ್ಯಾಮ್ ಹಾಗೂ 8ಜಿಬಿ ಇಂಟರ್ನಲ್ ಮೆಮೊರಿ ನೀಡಲಾಗಿದೆ.

8 ಮೆಗಾಪಿಕ್ಸಲ್ ಕ್ಯಾಮರಾದ ಈ ಫೋನ್ 5 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ಹೊಂದಿದೆ. ಭಾರತ ಮಾರುಕಟ್ಟೆಯಲ್ಲಿ ಇದು ನೋಕಿಯಾದ ಐದನೇ ಸ್ಮಾರ್ಟ್ಫೋನ್ ಆಗಿದೆ. ಈ ಹಿಂದೆ ನೋಕಿಯಾ 6, ನೋಕಿಯಾ 3, ನೋಕಿಯಾ 5 ಬಿಡುಗಡೆ ಮಾಡಿದೆ. ಹಬ್ಬದ ವೇಳೆ ನೋಕಿಯಾ 8 ಬಿಡುಗಡೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...