alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ನೋಕಿಯಾ 2 ಸ್ಮಾರ್ಟ್ಫೋನ್ ಬೆಲೆ ಎಷ್ಟು ಗೊತ್ತಾ?

ನೋಕಿಯಾ ತನ್ನ ಹೊಸ ಸ್ಮಾರ್ಟ್ಫೋನ್ ನೋಕಿಯಾ 2 ಬೆಲೆಯನ್ನು ಬಹಿರಂಗಪಡಿಸಿದೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ನೋಕಿಯಾ 2 ಸ್ಮಾರ್ಟ್ಫೋನ್ ಬೆಲೆ ಎಷ್ಟು ಎಂಬುದನ್ನು ಹೇಳಿರಲಿಲ್ಲ. ಈಗ ಭಾರತದಲ್ಲಿ ನೋಕಿಯಾ2 ಬೆಲೆ ಎಷ್ಟು ಎಂಬುದನ್ನು ಕಂಪನಿ ಹೇಳಿದೆ.

ಭಾರತದಲ್ಲಿ ನೋಕಿಯಾ2 ಸ್ಮಾರ್ಟ್ಫೋನ್ 6,999 ರೂಪಾಯಿಗೆ ಗ್ರಾಹಕರಿಗೆ ಸಿಗಲಿದೆ. ರೆಡ್ ಮಿ 4ಎ ಹಾಗೂ ಮೋಟೋ ಸಿ ಪ್ಲಸ್ ಗೆ ಟಕ್ಕರ್ ನೀಡಲು ನೋಕಿಯಾ ಈ ಬೆಲೆ ನಿಗದಿಪಡಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನವೆಂಬರ್ 24 ಅಂದ್ರೆ ಇಂದಿನಿಂದ ಆಫ್ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿದೆ.

ನೋಕಿಯಾ 2 ಮೆಟಲ್ ಪ್ರೇಮ್ ಹೊಂದಿದ್ದು, 5 ಇಂಚಿನ ಸ್ಕ್ರೀನ್ ಹೊಂದಿದೆ. ಹೆಚ್ ಎಂ ಡಿ ಪ್ರಕಾರ ಒಮ್ಮೆ ಬ್ಯಾಟರಿ ಫುಲ್  ಚಾರ್ಜ್ ಆದ್ರೆ ಎರಡು ದಿನಗಳ ಕಾಲ ಬ್ಯಾಕಪ್ ನೀಡಲಿದೆಯಂತೆ. 1ಜಿಬಿ ರ್ಯಾಮ್ ಹಾಗೂ 8ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಸ್ಮಾರ್ಟ್ಫೋನ್ 8 ಮೆಗಾಫಿಕ್ಸಲ್ ರಿಯಲ್ ಕ್ಯಾಮರಾ ಹಾಗೂ 5 ಮೆಗಾಫಿಕ್ಸಲ್ ಸೆಲ್ಫಿ ಕ್ಯಾಮರಾ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...