alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತಕ್ಕೆ ಬಂತು ನೋಕಿಯಾ 150 ಡ್ಯುಯೆಲ್ ಸಿಮ್ ಫೋನ್

resizer

ನೋಕಿಯಾ ಫೀಚರ್ ಫೋನ್ ನಿರೀಕ್ಷೆಯಲ್ಲಿದ್ದವರು ನೀವಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ನೋಕಿಯಾ 150 ಡ್ಯುಯೆಲ್ ಸಿಮ್ ಫೋನ್ ಮಾರಾಟ ಭಾರತದಲ್ಲಿ ಶುರುವಾಗಿದೆ. ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ನಲ್ಲಿ ನೋಕಿಯಾ ಫೋನ್ ಬೆಲೆ 2059 ರೂಪಾಯಿ.

ಹಿಂದಿನ ವರ್ಷವೇ ಹೆಚ್ ಎಂ ಡಿ ಗ್ಲೋಬಲ್, ಈ ಫೋನ್ ಬಗ್ಗೆ ಅಧಿಕೃತ ಮಾಹಿತಿ ನೀಡಿತ್ತು. ಡ್ಯುಯೆಲ್ ಹಾಗೂ ಸಿಂಗಲ್ ಸಿಮ್ ಮಾರುಕಟ್ಟೆಗೆ ತರುವುದಾಗಿ ಹೇಳಿತ್ತು. ಆದ್ರೀಗ ಭಾರತದಲ್ಲಿ ಡ್ಯುಯೆಲ್ ಸಿಮ್ ಫೋನ್ ಮಾತ್ರ ಲಭ್ಯವಿದೆ. ಇದು ಬೇಸಿಕ್ ಸೆಟ್ ಆಗಿದ್ದು ನೆಟ್ ಬಳಕೆ ಸಾಧ್ಯವಿಲ್ಲ. ಒಂದೇ ಬಾರಿ ಎರಡು ಸಿಮ್ ಬಳಸುವ ಜೊತೆಗೆ ಎಂಪಿ3, ಎಫ್ ಎಂ, ಬ್ಲೂಟೂತ್ ಸೌಲಭ್ಯವನ್ನು ಗ್ರಾಹಕರು ಪಡೆಯಬಹುದಾಗಿದೆ.

ಬಿಜಿಎ ಕ್ಯಾಮರಾ ಜೊತೆಗೆ ಎಲ್ ಇ ಡಿ ಫ್ಲಾಶ್ ಹೊಂದಿದೆ ಸೆಟ್. ಈ ಫೋನ್ ಗೆ 1020 mAh ಬ್ಯಾಟರಿ ಅಳವಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...